ಜಾರ್ಖಂಡ್: ದೀಪಾವಳಿಯನ್ನು ನಿನ್ನೆ ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಆದರೆ ದುರಂತ ಒಂದು ಸಂಭವಿಸಿದೆ. ದೀಪಾವಳಿ ಈ ಸಂಭ್ರಮದಲ್ಲಿದ್ದ ಚಾಲಕ-ಕಂಡಕ್ಟರ್ ತಮ್ಮ ಪ್ರಾಣ ಕಳೆದುಕೊಂಡಿರುವ ಘಟನೆ ರಾಂಚಿಯಲ್ಲಿ ನಡೆದಿದೆ.

ಚಾಲಕ ಮತ್ತು ಕಂಡಕ್ಟರ್ ಹಬ್ಬ ಆಚರಿಸಲೆಂದು ಬಸ್‌ನಲ್ಲಿ ಪೂಜೆ ಮಾಡಿ ದೀಪ ಹಚ್ಚಿದ್ದರು.ರಾತ್ರಿಯಾದ ಕಾರಣ ಅವರು ಬಸ್‌ನಲ್ಲೇ ಮಲಗಿದ್ದರು. ಈ ವೇಳೆ ಬಸ್‌ನಲ್ಲಿ ಹಚ್ಚಿಟ್ಟಿದ್ದ ದೀಪದಿಂದ ಬಸ್‌ ಬೆಂಕಿಗಾಹುತಿಯಾಗಿದೆ. ಬಸ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಬಸ್‌ನಲ್ಲಿ ಮಲಗಿದ್ದ ಚಾಲಕ-ಕಂಡಕ್ಟರ್ ಇಬ್ಬರೂ ಕೂಡ ಸಜೀವ ದಹನವಾಗಿದ್ದಾರೆ. ಮೃತರನ್ನು ಮದನ್ ಮತ್ತು ಖಲಾಸಿ ಇಬ್ರಾಹಿಂ ಎಂದು ಗುರುತಿಸಲಾಗಿದೆ. ರಾತ್ರಿ ಒಂದು ಗಂಟೆಯ ಸುಮಾರಿಗೆ ಈ ಘೋರ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಪ್ರಕರಣದ ಬಗ್ಗೆ ಮಾಹಿತಿ ತಿಳಿದ ನಂತರ ಪೊಲೀಸರು ಮತ್ತು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ  ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಆದರೆ ಬಸ್ಸಿನೊಳಗೆ ಎರಡು ಸುಟ್ಟ ಮೃತದೇಹಗಳು ಪತ್ತೆಯಾಗಿವೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ