ಬೆಳ್ತಂಗಡಿ: ತೀವ್ರ ಜ್ವರದಿಂದ ಸಹೋದರರಿಬ್ಬರು ಮರಣ ಹೊಂದಿದ ಖೇದಕರ ಘಟನೆ ಬೆಳ್ತಂಗಡಿ ತಾಲೂಕಿನ ಮದ್ದಡ್ಕದ ಲಾಡಿ ಎಂಬಲ್ಲಿ ನಡೆದಿದೆ.

ಸಫ್ವಾನ್ ಮತ್ತು ಸಿನಾನ್ ಮೃತ ಮಕ್ಕಳು. ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಮಕ್ಕಳಿಗೆ ಮನೆಯಲ್ಲೇ ಇದ್ದ ಮದ್ದು ನೀಡುತ್ತಿದ್ದು, ಎಷ್ಟೇ ಔಷಧಿ ಕೊಟ್ಟರೂ ಜ್ವರ ಕಡಿಮೆಯಾಗಿರಲಿಲ್ಲ.

ಜ್ವರ ಉಲ್ಬಣಗೊಂಡ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ. ಒಂದು ಮಗು ನಿನ್ನೆ ಮಧ್ಯಾಹ್ನ ಮೃತಪಟ್ಟರೆ ಮತ್ತೊಂದು ಮಗು ಮಂಗಳವಾರ ಬೆಳಗ್ಗೆ ಅಸುನೀಗಿದೆ.ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ