Advertisement
ಹಳೆಗೇಟು: ಇಲ್ಲಿನ ಡೊಮಿನಿಕ್ ಡಿಸೋಜಾ ಎಂಬುವವರ ಅಂಗಡಿಗೆ ನಿನ್ನೆ ರಾತ್ರಿ ಕಳ್ಳರು ಕನ್ನ ಹಾಕಿ ಸರಿಸುಮಾರು ₹20 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.


ಎಂದಿನಂತೆ ಬೆಳಿಗ್ಗೆ ಅಂಗಡಿ ಮಾಲೀಕರ ಮಗಳು ಬಂದು ಅಂಗಡಿ ಬಾಗಿಲು ತೆರೆಯಲು ಬಂದಾಗ ಕಳ್ಳತನವಾಗಿರುವ ಬಗ್ಗೆ ತಿಳಿದುಬಂದಿದ್ದು, ಕೂಡಲೇ ಅವರು ತಮ್ಮ ತಂದೆಯವರಿಗೆ ಫೋನ್ ಹಾಯಿಸಿ ವಿಷಯ ತಿಳಿಸಿದ್ದಾರೆ. ತದನಂತರ ಅವರು ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕಳ್ಳತನ ಮಾಡಿರುವವರು ಅಂಗಡಿಯ ಶಟರ್ ಬೀಗವನ್ನು ಮುರಿದಿರುವ ಶಂಕೆಯನ್ನು ಅಂಗಡಿ ಮಾಲಕರು ಹೇಳಿದ್ದು ಕ್ಯಾಶ್ ಕೌಂಟರಿನಲ್ಲಿದ್ದ ಹಣವನ್ನು ಎಗರಿಸಿ, ಕ್ಯಾಶ್ ಕೌಂಟರ್ ಗೆ ನೀರನ್ನು ಹಾಕಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.
Advertisement