ಸುಳ್ಯ ಅಗಸ್ಟ್14: ಸುಳ್ಯದಿಂದ ಮಂಗಳೂರಿಗೆ ನಿತ್ಯ ಕೆಎಸ್ಆರ್ಟಿಸಿ ಬಸ್ಗಾಗಿ ಪರದಾಡುತ್ತಿರುವ ವಿದ್ಯಾರ್ಥಿಗಳು, ನೌಕರರು ಕಾದು ಕಾದು ಸುಸ್ತಾಗಿದ್ದಾರೆ. ಸುಳ್ಯದಿಂದ ಮಂಗಳೂರಿಗೆ ಬಸ್ ತೊಂದರೆ ಇದ್ದು, ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ, ನೌಕರರಿಗೆ ಕಷ್ಟದ ಪರಿಸ್ಥಿತಿ ಬಂದೊದಗಿದೆ.
ಮಡಿಕೇರಿ ಯಿಂದ ಮಂಗಳೂರು ಕಡೆ ಬರುವ ಸಮಯದಲ್ಲೇ ಬಸ್ ಫುಲ್ ರಷ್ ಆಗಿ ಇರುತ್ತದೆ. ಇದರ ಮಧ್ಯೆ ಸುಳ್ಯದಿಂದ ಮಂಗಳೂರಿಗೆ ಹೊರಟಿರುವ ಪ್ರಯಾಣಿಕರಿಗೆ ಸೀಟ್ ಬಿಡಿ ನಿಂತುಕೊಂಡು ಹೋಗಲು ಬಸ್ ನಲ್ಲಿ ಸ್ಥಳಾವಕಾಶ ಇರುವುದಿಲ್ಲ ಅಷ್ಟು ಜನ ತುಂಬಿತುಳುಕಿರುತ್ತದೆ. ವಿದ್ಯಾರ್ಥಿಗಳು ತಮ್ಮ ಜೀವ ಕೈಯಲ್ಲಿ ಹಿಡೊದುಕೊಂಡು ನೇತಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನಾಹುತ ಸಂಭವಿಸಿದರೆ ಇದಕ್ಕೆಲ್ಲ ಹೊಣೆ ಯಾರು ಎಂಬ ಪ್ರಶ್ನೆ ಕೂಡಾ ಕಾಡ್ತಾಯಿದೆ.
ನಮ್ಮ ಪರದಾಟವನ್ನು ನೋಡಲು ಯಾರು ಇಲ್ಲದಂತಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಸೂಕ್ತ ಪರಿಹಾರ ನೀಡಬೇಕಾಗಿದೆ.