
ಸುಳ್ಯ: ಇದೇ ಬರುವ ಡಿ.10 ರಂದು ಗೂನಡ್ಕದ ಸಜ್ಜನ ಸಭಾಂಗಣದಲ್ಲಿ ನಡೆಯಲಿರುವ ೨೬ ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಎನ್.ಎಂ.ಸಿ ಅರಂತೋಡು ನಿವೃತ್ತ ಪ್ರಾಾಂಶುಪಾಲ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ, ಲೇಖಕ ಕೆ.ಆರ್ . ಗಂಗಾಧರ ಅವರು ಆಯ್ಕೆಯಾಗಿದ್ದಾರೆ. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ಶ್ರೀನಾಥ್ ಎಂ.ಪಿ. ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು ಸಮ್ಮೇಳನದ ಅಧ್ಯಕ್ಷರ ಘೋಷಣೆ ಮಾಡಿದ್ದಾರೆ.


ಇಂದು ಕನ್ನಡ ಭವನದಲ್ಲಿ ನಡೆದಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಪೂರ್ವ ಸಮ್ಮೇಳನ ಅಧ್ಯಕ್ಷರುಗಳ ಸಮಾಲೋಚನಾ ಸಭೆಯ ಬಳಿಕ ಕೆ.ಆರ್.ಗಂಗಾಧರ್ ಅವರ ಹೆಸರನ್ನು ಪ್ರಕಟಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಕ.ಸಾ.ಪ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು.

ಸಾಹಿತ್ಯ ಸಮ್ಮೇಳನದ ಪೂರ್ವಾಧ್ಯಕ್ಷರುಗಳಾದ ಶೀಲಾವತಿ ಕೊಳಂಬೆ, ಲಲಿತಾಜ ಮಲ್ಲಾಾರ, ಡಾ.ಪೂವಪ್ಪ ಕಣಿಯೂರು, 26ನೇ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಡಾ.ಲೀಲಾಧರ್ ಡಿ.ವಿ., ಪ್ರಧಾನ ಕಾರ್ಯದರ್ಶಿ ದಾಮೋದರ ಗೌಡ ಬೈಲೆ, ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ಚಂದ್ರಮತಿ ಕೆ. , ತೇಜಸ್ವಿ ಕಡಪಳ, ನಿರ್ದೇಶಕರುಗಳಾದ ಪ್ರೊ.ಬಾಲಚಂದ್ರ ಗೌಡ, ಪ್ರೊ.ಸಂಜೀವ ಕುದ್ಪಾಜೆ, ಡಾ. ರೇವತಿ ನಂದನ್, ಜಯರಾಮ ಶೆಟ್ಟಿ, ಗೋಪಿನಾಥ ಮೆತ್ತಡ್ಕ, ಕೇಶವ ಸಿ.ಎ., ರಮೇಶ್ ನೀರಬಿದಿರೆ, ಶರೀಫ್ ಜಟ್ಟಿಪಳ್ಳ, ದೇವಪ್ಪ ಹೈದಂಗೂರು, ಯೋಗೀಶ್ ಹೊಸೊಳಿಕೆ, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಶಶ್ಮಿ ಭಟ್ ಅಜ್ಜಾವರ, ಸಾವಿತ್ರಿ ಕಣೆಮರಡ್ಕ, ಚರಿಷ್ಮಾಕಡಪಳ, ಗೌರವ ಸಲಹೆಗಾರರಾದ ಲೀಲಾ ದಾಮೋದರ್ ಉಪಸ್ಥಿತರಿದ್ದರು.