Advertisement
ನಿಸ್ವಾರ್ಥ ಸಾಮಾಜಿಕ ಸೇವೆಯ ಹೆಜ್ಜೆಗಳಿಗೆ ಸ್ಪೂರ್ಥಿಯ ಸೆಲೆಯೆಂಬಂತೆ ಶಕ್ತಿ ತುಂಬಿದ ಈ ಬಾರಿಯ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ.
ಕರುನಾಡ ಮಣ್ಣಿನ ಕರಾವಳಿಯ ಕಡಲತಡಿಯಿಂದ ಕಡಲಾಚೆಗಿನ ಕೊಲ್ಲಿ ರಾಷ್ಟ್ರಗಳವರೆಗೆ ಕಾರುಣ್ಯ ಚಟುವಟಿಕೆಗಳಿಗೆ ನೇತೃತ್ವ ನೀಡಲು ಸಹಕಾರಿಗಳಾದ ನಿಮ್ಮೆಲ್ಲರಿಗೂ ಈ ಸಂದರ್ಭದಲ್ಲಿ ಹೃದಯಂತರಾಳದ ಕೃತಜ್ಞತೆಗಳು.
ನಮ್ಮ ಅಳಿಲು ಸೇವೆಯನ್ನು ಪರಿಗಣಿಸಿ ನಮ್ಮನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಿದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕೃತಜ್ಞತೆಗಳು.ನಮ್ಮ ಈ ಪ್ರಶಸ್ತಿಯು ನಮ್ಮ ಜೊತೆ ಸದಾ ಬೆನ್ನೆಲುಬಾಗಿ ನಿಂತು ರೋಗಿಗಳ ಜೀವ ಉಳಿಸುತ್ತಿರುವ ನೈಜ ಹೀರೋಗಳಾದ ಬ್ಲಡ್ ಡೋನರ್ಸ್ ಗಳಿಗೆ ಹಾಗೂ ಸೇವಾರಂಗದಲ್ಲಿ ನಿತ್ಯನಿರಂತರವಾಗಿರುವ ನಮ್ಮ ಸಂಸ್ಥೆಯ ಸರ್ವ ಪದಾಧಿಕಾರಿಗಳಿಗೆ ಬಹಳ ಪ್ರೀತಿಯಿಂದ ಸಮರ್ಪಿಸುತ್ತಿದ್ದೇವೆ.
ಬ್ಲಡ್ ಡೋನರ್ಸ್ ಮಂಗಳೂರು(ರಿ.)
Advertisement