ಬೆಂಗಳೂರು: ಫೆಬ್ರವರಿ 14, 2019 ರಂದು, ಜಮ್ಮು – ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಪುಲ್ವಾಮಾ ಎಂಬಲ್ಲಿ ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ, ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ಈ ದಾಳಿಯಿಂದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಮಂದಿ ಯೋಧರು ಹುತಾತ್ಮರಾಗಿದ್ದರು.

ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ ಇಸ್ಲಾಮ್ ಉಗ್ರಗಾಮಿ ಗುಂಪು ಜೈಷ್–ಎ–ಮೊಹಮದ್ ಹೊತ್ತುಕೊಂಡಿತ್ತು. ಬರೀ ಭಾರತವಷ್ಟೇ ಅಲ್ಲ, ಜಗತ್ತಿನ ಎಲ್ಲಾ ದೇಶಗಳು ಈ ದಾಳಿ ಬಗ್ಗೆ ತಿಳಿದು ಬೆಚ್ಚಿ ಬಿದ್ದಿದ್ದವು. ಹುತಾತ್ಮ ಸೈನಿಕರ ಸಾವಿಗೆ ಮರುಗಿದ್ದವು. ಆದರೆ ಬೆಂಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮಾತ್ರ ಸೈನಿಕರ ಸಾವಿಗೆ ಸಂಭ್ರಮಿಸಿದ್ದ. ಇದೀಗ ಬೆಂಗಳೂರು ನ್ಯಾಯಾಲಯವು ಆತನಿಗೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಜೊತೆಗೆ 25 ಸಾವಿರ ರೂಪಾಯಿ ದಂಡ ಕೂಡಾ ವಿಧಿಸಲಾಗಿದೆ. ಮೂರನೇ ಸೆಮಿಸ್ಟರ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಫೈಜ್ ರಶೀದ್ ಎಂಬಾತನೇ ಈ ಅಪರಾಧಿ.

ಯೋಧರು ಸಾವನ್ನಪ್ಪಿದ್ದ ಬಗ್ಗೆ ಫೇಸ್‌ಬುಕ್ ಪೋಸ್ಟ್‌ ಹಾಕಿ. ಅವಹೇಳನ ಮಾಡಿದ್ದ ಎಂಬ ಆರೋಪದ ಮೇಲೆ ಬಂಧಿಸಲಾಗಿತ್ತು. ಪುಲ್ವಾಮಾ ದಾಳಿ ನಡೆದ ಬಳಿಕ ಅಪರಾಧಿ ರಶೀದ್ ಒಟ್ಟು 23 ಕಾಮೆಂಟ್‌ಗಳನ್ನು ಮಾಡಿದ್ದ. ಭಾರತೀಯ ಸೇನೆಯ ಅವಹೇಳನ ಮಾಡುವ ಜೊತೆಯಲ್ಲೇ ಉಗ್ರ ದಾಳಿಯನ್ನು ಸಂಭ್ರಮಿಸಿದ್ದ. ಫೇಸ್‌ಬುಕ್‌ನಲ್ಲಿ ಆತ ಮಾಡಿದ್ದ ಅವಹೇಳನಕಾರಿ ಕಾಮೆಂಟ್‌ಗಳು ದೃಢಪಟ್ಟಿದ್ದವು. ಆತನ ಫೇಸ್‌ಬುಕ್ ಖಾತೆಯಲ್ಲಿ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಮೇಲೆ ನಡೆದ ಉಗ್ರರ ಆತ್ಮಾಹುತಿ ದಾಳಿಯನ್ನು ಬೆಂಬಲಿಸುವಂತಹ ಪೋಸ್ಟ್‌ಗಳು ಇದ್ದದ್ದು ದೃಢಪಟ್ಟಿತ್ತು. ಕೋಮು ದ್ವೇಷ ಭಾವನೆ ಹರಡುವುದರ ಜೊತೆಯಲ್ಲೇ ಸಾರ್ವಜನಿಕ ಶಾಂತಿ ಕದಡುವ ಆರೋಪ ಕೂಡಾ ದೃಢಪಟ್ಟಿತ್ತು.

Courtesy: ಕರುನಾಡ ನ್ಯೂಸ್

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ