ಸುಳ್ಯ : ದೇಶಾವೇ ತಲ್ಲಣಗೊಂಡ ದ.ಕ.ಸುಳ್ಯ ತಾಲೂಕಿನ ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ನಡೆದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಘಟನೆ ನಡೆದು ಎರಡು ತಿಂಗಳುಗಳೆ ಕಳೆದಿದ್ದರೂ ಇನ್ನೂ ಕೆಲ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಪ್ರವೀಣ್ ನೆಟ್ಟಾರ್ ಅವರ ಹತ್ಯಾನಂತರ ಪರಿಸ್ಥಿತಿ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತು, ಕೊನೆಗೆ ತನಿಖೆಯ ಜವಾಬ್ದಾರಿಯನ್ನು ಸರಕಾರವು ಎನ್ನೈಎಗೆ ವಹಿಸಿತ್ತು. ಎನ್ ಐ ಎ ತನಿಖೆ ವಹಿಸಿಕೊಳ್ಳಲು ತಡ ಆದ ಕಾರಣದಿಂದ ಕೆಲ ಆರೋಪಿಗಳು ತುಂಬಾ ಹುಷಾರಾಗಿದ್ದು ತಪ್ಪಿಸಿಕೊಂಡಿದ್ದರು. ಅವರು ಇವತ್ತಿಗೂ ಸಿಕ್ಕಿಲ್ಲ. ಅಲ್ಲಿ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಾಲ್ವರು ಆರೋಪಿಗಳ ಪತ್ತೆಗೆ ಈಗ ಎನ್‌ಐಎ ಬಹುಮಾನ ಘೋಷಿಸಿದೆ. ಈ ಗುರುತಿನ ವ್ಯಕ್ತಿಗಳು ಅಥವಾ ಇಂಥವರನ್ನು ಹೋಲುವ ವ್ಯಕ್ತಿಗಳು ಎಲ್ಲಾದರೂ ಕಂಡುಬಂದರೆ ತಕ್ಷಣ ಮೇಲೆ ತಿಳಿಸಿದ ಎನ್ನೈಯೇ ತಂಡಕ್ಕೆ ಗೌಪ್ಯವಾಗಿ ತಿಳಿಸಬೇಕೆಂದು ಕೋರಲಾಗಿದೆ.
Advertisement
Advertisement