ಮಂಗಳೂರು ಸಮೀಪದ ಅಡ್ಯಾರ್ ನ ಬರಕಾ ಇಂಟರ್ನ್ಯಾಷನಲ್ ಸ್ಕೂಲ್ ಹಾಗೂ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡ 78ನೇ ಸ್ವಾತಂತ್ರ ದಿನಾಚರಣೆಯ ಧ್ವಜಾರೋಹಣವನ್ನು ಅಡ್ಯಾರ್ ಪಂಚಾಯತ್ ಅಧ್ಯಕ್ಷರಾದ ಮುಹಮ್ಮದ್ ಯಾಸೀನ್ ಇವರು ನೆರವೇರಿಸಿದರು.
ನಂತರ ಮಾತಾಡಿದ ಅವರು,ವಿಧ್ಯಾರ್ಥಿಗಳು ಹೆಚ್ಚಾಗಿ ಸಿವಿಲ್ ಪರೀಕ್ಷೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಶಾಲಾ ನಿರ್ದೇಶಕರಾದ ಮುಹಮ್ಮದ್ ಅಯಾನ್, ಕಾಲೇಜು ಪ್ರಾಂಶುಪಾಲರಾದ ಫಾತಿಮತ್ ಅಶೂರಾ, ಉಪ ಪ್ರಾಂಶುಪಾಲರಾದ ಸೌಸ್ರೀನ್, ಇಸ್ಲಾಮಿಕ್ ವಿಭಾಗದ ಪ್ರಾಂಶುಪಾಲರಾದ ಮುಹಮ್ಮದ್ ಹನೀಫ್ ಬೋಳಂತೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.