ಸುಳ್ಯ: ಮುಹಿಯದ್ದೀನ್ ಜುಮ್ಮಾ ಮಸ್ಜಿದ್, ಮುನವ್ವಿರುಲ್ ಇಸ್ಲಾಂ ಮದ್ರಸ ವತಿಯಿಂದ 78 ನೇ ಸ್ವಾತಂತ್ರೋತ್ಸವ ವನ್ನು ಮದ್ರಸ ಸಭಾಂಗಣ ದಲ್ಲಿ ವಿವಿಧ ಕಾರ್ಯಕ್ರಮ ಗಳೊಂದಿಗೆ ಆಚರಿಸಲಾಯಿತು
ಜಮಾಅತ್ ಸಮಿತಿ ಅಧ್ಯಕ್ಷ ಹಾಜಿ ಕೆ. ಎಂ. ಮಹಮ್ಮದ್ ಕೆಎಂಎಸ್ ಧ್ವಜಾರೋಹಣ ಗೈದರು
ಖತೀಬರಾದ ಅಲ್ಹಾಜ್ ಅಶ್ರಫ್ ಖಾಮಿಲ್ ಸಖಾಫಿ ಸಂದೇಶ ಭಾಷಣ ನೀಡಿ ದೇಶದ ಐಕ್ಯತೆ ಮತ್ತು ಸoರ ಕ್ಷಣೆ ಪ್ರತಿಯೊಬ್ಬರ ಕರ್ತವ್ಯ, ಅದುವೇ ನೈಜ ಧರ್ಮಾನುಯಾಯಿ ಎಂದರು ಧಾರ್ಮಿಕ ನಂಬಿಕೆಗಳು ದೇಶದ ಅಡಿಪಾಯ, ಯಾವುದೇ ಧರ್ಮ ಒಳಿತನ್ನು ಬಯಸುತ್ತದೆಯೇ ಹೊರತು ಕೆಡುಕನ್ನಲ್ಲ ಎಂದರು
ಜಮಾಅತ್ ಸಮಿತಿ ಪರವಾಗಿ ಹಾಜಿ ಕೆ. ಎಂ. ಮುಸ್ತಫ, ಮಅಲ್ಲಿಓ ರಿಯಾನ್ ಸಅದಿ ಶುಭಾಶoಸನೆ ಮಾಡಿದರು
ಶಿಕ್ಷಕ ಮುದಬ್ಬಿರ್ ಪ್ರತಿಜ್ಞಾ ವಿಧಿ ಬೋದಿಸಿದರು
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹಮೀದ್ ಬೀಜಕೊಚ್ಚಿ, ಪ್ರದಾನ ಕಾರ್ಯದರ್ಶಿ ಮುಹಿಯದ್ದೀನ್ ಫ್ಯಾನ್ಸಿ, ಕಾರ್ಯದರ್ಶಿಗಳಾದ ಕೆ. ಎಸ್. ಉಮ್ಮರ್, ಜಿ. ಎಂ. ಇಬ್ರಾಹಿಂ ಶಿಲ್ಪ, ಖಜಾಂಚಿ ಹಾಜಿ ಎಸ್. ಎಂ. ಅಬ್ದುಲ್ ಹಮೀದ್,ಮದ್ರಸ ಉಸ್ತುವಾರಿ ಗಳಾದ ಕೆ. ಬಿ. ಅಬ್ದುಲ್ ಮಜೀದ್, ಹಮೀದ್ ಹಾಜಿ, ಹಾಜಿ ಇಸ್ಮಾಯಿಲ್ ನಿರ್ದೇಶಕರುಗಳಾದ ಅಬ್ದುಲ್ ಖಾದರ್ ಅಜಾದ್, ಮುದರ್ರಿಸ್ ಇರ್ಫಾನ್ ಸಖಾಫಿ ದುಃವ ನೆರವೇರಿಸಿದರು, ಮುಅಝಿನ್ ರವೂಫ್ ಝುಹರಿ ಮೊದಲಾದವರು ಉಪಸ್ಥಿತರಿದ್ದರು
ಮದ್ರಸ ವಿದ್ಯಾರ್ಥಿಗಳಾದ ಕರ್ರಾರ್, ಲಾದಿಮ್, ಶಹೀಮ್ ಮತ್ತು ದರ್ಸ್ ವಿದ್ಯಾರ್ಥಿಗಳಾದ ಬಾತೀಶ್, ರಂಝಿ ಸ್ವಾತಂತ್ರ್ಯ ಗೀತೆ ಪ್ರಸ್ತುತ ಪಡಿಸಿದರು
ಆಕರ್ಷಕ ಪಥಸಂಚಲನ ನಡೆಯಿತು
ಸದರ್ ಉಸ್ತಾದ್ ಸಿರಾಜುದ್ದೀನ್ ಸಖಾಫಿ ಸ್ವಾಗತಿಸಿ, ವಂದಿಸಿದರು