Advertisement
ಸುಬ್ರಹ್ಮಣ್ಯ : ಹೊಳೆಗೆ ಬಿದ್ದು ಇಬ್ಬರು ದಾರುಣವಾಗಿ ಸಾವನಪ್ಪಿರುವ ದುರ್ಘಟನೆ ಮಂಗಳವಾರ ತಡ ರಾತ್ರಿ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಏನೇಕಲ್ ಎಂಬಲ್ಲಿ ನಡೆದಿದೆ. ಮೃತರನ್ನು ಧರ್ಮ ಪಾಲ ( ೪೬) ಹಾಗೂ ಬೆಳ್ಯಪ್ಪ ಚಳ್ಳಂಗಾರು ಚೊಕ್ಕಾಡಿ (೪೯) ಎಂದು ಗುರುತಿಸಲಾಗಿದೆ. ಮೃತರಪಟ್ಟವರ ಪೈಕಿ ಧರ್ಮಪಾಲ ಎಂಬುವವರು ಏನೇಕಲ್ ನ ಕಸ ವಿಲೇವಾರಿ ಘಟಕದಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು. ಹೊಳೆಯಲ್ಲಿ ಪಂಪಿನ್ ಫೂಟ್ ವಾಲ್ ತೆಗೆಯುವುದಕ್ಕೆ ನೀರಿನಲ್ಲಿ ಇಳಿದಾಗ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಇಬ್ಬರ ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಲಾಗಿದೆ.


Advertisement