ತಿರುವನಂತಪುರ: ಬಾಲಿವುಡ್‌ ಬೆಡಗಿ ಸನ್ನಿಲಿಯೋನ್‌ ಮತ್ತು ಇತರೆ ಇಬ್ಬರು ವಂಚನೆ ಮಾಡಿದ್ದಾರೆ ಎಂದು ಕೇರಳ ಹೈಕೋರ್ಟ್‌ನಲ್ಲಿ ಈ ಮೂವರ ವಿರುದ್ಧ ಕೇಸ್ ದಾಖಲಾಗಿದೆ. ಸೋಮವಾರ ಈ ಕೇಸ್‌ ದಾಖಲಾಗಿದ್ದು, ಕೇಸ್‌ ವಜಾಗೊಳಿಸುವಂತೆ ನಟಿ ಸನ್ನಿಲಿಯೋನ್‌ ಮಂಗಳವಾರ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮೂರು ವರ್ಷದ ಹಿಂದೆ ಒಂದು ಕಾರ್ಯಕ್ರಮಕ್ಕೆ ಭಾಗವಹಿಸುವುದಕ್ಕೆ ಮುಂಗಡ ಹಣ ಪಡೆದು ವಂಚಿಸಿದ್ದಾರೆ ಎಂಬುದು ಸನ್ನಿ ಲಿಯೋನ್‌ ಮತ್ತು ಇತರ ಇಬ್ಬರ ಮೇಲಿರುವ ಆರೋಪವಾಗಿದ್ದು, ಕ್ರೈಂಬ್ರಾಂಚ್‌ ಈ ಸಂಬಂಧ ಕೇಸ್‌ ಕೂಡ ದಾಖಲಿಸಿಕೊಂಡಿದೆ. ಸನ್ನಿ ಲಿಯೋನ್‌ ಸಲ್ಲಿಸಿದ ಅರ್ಜಿಯನ್ನು ಏಕಸದಸ್ಯ ಪೀಠದಲ್ಲಿ ನ್ಯಾಯಮೂರ್ತಿ ಜಿಯಾದ್‌ ರಹಮಾನ್‌ ಅವರು ಸ್ವೀಕರಿಸಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ಸನ್ನಿಲಿಯೋನ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ಮುಗಿಯುವ ತನಕ ಅವರ ವಿರುದ್ಧ ದೂರಿಗೆ ಸಂಬಂಧಿಸಿ ಯಾವುದೇ ಕ್ರಮ ತೆಗೆಯಬಾರದು ಎಂದು ಪೊಲೀಸರಿಗೆ ಕೋರ್ಟ್‌ ಸೂಚನೆ ನೀಡಿದೆ. ಕೊಚ್ಚಿಯ ಪೆರುವಂಬವೂರ್‌ ನಿವಾಸಿ ಎಂ.ಶಿಯಾಸ್‌ ಅವರು‌ ಡಿಜಿಪಿ ಲೋಕನಾಥ್‌ ಬೆಹ್ರಾಗೆ ದೂರು ನೀಡಿದ್ದರು. ಡಿಜಿಪಿ ಆದೇಶದ ಮೇರೆಗೆ ಕ್ರೈಂ ಬ್ರಾಂಚ್‌ ಪೊಲೀಸರು ತನಿಖೆ ಶುರು ಮಾಡಿದ್ದರು. ಆ ಸಂದರ್ಭದಲ್ಲಿ ಸನ್ನಿ ಲಿಯೋನ್‌ ಅವರು ಪೊಲೀಸರನ್ನು ಸಂಪರ್ಕಿಸಿ, ತಾನು ಕಾರ್ಯಕ್ರಮದಲ್ಲಿ ಭಾಗವಹಿಸುವೆ ಅಥವಾ ಮುಂಗಡ ಪಡೆದ ಹಣ ಹಿಂತಿರುಗಿಸುವೆ ಎಂದು ಹೇಳಿದ್ದರು. ಆದರೆ ಇದು ಈಡೇರಿರಲಿಲ್ಲ. ಈ ಪ್ರಕರಣ ಸಂಬಂಧ ಸನ್ನಿಲಿಯೋನ್‌ ಎರಡು ಸಲ ವಿಚಾರಣೆ ಎದುರಿಸಿದ್ದರು. ಸನ್ನಿ ಲಿಯೋನ್‌ ಅವರ ಮ್ಯಾನೇಜರ್‌ ಈ ವ್ಯವಹಾರ ನಡೆಸಿದ್ದು ₹30 ಲಕ್ಷ ಪಡೆದುಕೊಂಡಿದ್ದರು. ಸಂಘಟಕರಿಗೆ ಡೇಟ್‌ ನೀಡಿದ ಬಳಿಕ ಅನೇಕ ಸಲ ದಿನಾಂಕ ಬದಲಾಯಿಸಿದ್ದನ್ನೂ ಸನ್ನಿ ಲಿಯೋನ್‌ ಒಪ್ಪಿಕೊಂಡಿದ್ದಾರೆ. ಕೇರಳದಲ್ಲಿ 2019ರ ಫೆಬ್ರವರಿ ಒಂದು ತಿಂಗಳ ಕಾಲ ರಜೆಯಲ್ಲಿದ್ದಾಗ ಈ ಕಾರ್ಯಕ್ರಮದ ಪ್ರಸ್ತಾಪವು ಬಂದಿತ್ತು ಎಂದು ಸನ್ನಿ ಹೇಳಿದ್ದಾರೆ. ಆದರೆ, ₹30 ಲಕ್ಷ ಮುಂಗಡವನ್ನು ಸ್ವೀಕರಿಸಿದ ನಂತರ ಕಾರ್ಯಕ್ರಮಕ್ಕೆ ಹಾಜರಾಗಲು ವಿಫಲರಾದರು. ಇದು ನಂಬಿಕೆಯ ಉಲ್ಲಂಘನೆ ಎಂಬುದು ಸಂಘಟಕರ ವಾದ. ಕರಣ್‌ಜಿತ್ ಕೌರ್ ಅಲಿಯಾಸ್ ಸನ್ನಿ ಲಿಯೋನ್ ಜತೆಗೆ ಅವರ ಪತಿ ಡೇನಿಯಲ್ ವೆಬರ್ ಮತ್ತು ಅವರ ಮ್ಯಾನೇಜರ್ ಸುನಿಲ್ ರಜನಿ ಅವರ ಹೆಸರು ಎಫ್‌ಐಆರ್‌ನಲ್ಲಿ ಕಾಣಿಸಿಕೊಂಡಿದೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ