Advertisement
ಸುಳ್ಯ: ಇಲ್ಲಿನ ಕೆ.ವಿ.ಜಿ. ಕ್ಯಾಂಪಸ್ ನಲ್ಲಿ ಎನ್.ಎಸ್.ಎ. ಕಾಂಪ್ಲೆಕ್ಸ್ ನಲ್ಲಿ ಡಿ.ಎಂ. ಝಾಕಿರ್ ಮಾಲಕತ್ವದ ಐ ಸ್ಟೋರ್- ಐ ಫೋನ್ ಶೋ ರೂಂ ನ.17 ರಂದು ಶುಭಾರಂಭಗೊಂಡಿತು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ ಈ ಸಂಸ್ಥೆಯನ್ನು ಉದ್ಘಾಟಿಸಿದರು. “ಬೆಳೆಯುತ್ತಿರುವ ಸುಳ್ಯಕ್ಕೆ ಐ ಫೋನ್ ನ ಶೋ ರೂಂ ಅತ್ಯಗತ್ಯ. ಇದರ ಪ್ರಯೋಜನ ಎಲ್ಲರೂ ಪಡೆಯಲಿ” ಎಂದು ಆಶಿಸಿದರು.
ಕೆ.ವಿ.ಜಿ. ಡೆಂಟಲ್ ಕಾಲೇಜು ಆಡಳಿತಾಧಿಕಾರಿ ಬಿ.ಟಿ.ಮಾಧವ, ಸುಳ್ಯ ನ.ಪಂ. ಮಾಜಿ ಸದಸ್ಯ ಕೆ.ಎಂ. ಮುಸ್ತಫಾ, ಸುಳ್ಯ ಎಸ್ ಸಿಕ್ಸ್ ಗೌರವ ಸಲಹೆಗಾರ ರಾಜು ಪಂಡಿತ್ ಮುಖ್ಯ ಅತಿಥಿಗಳಾಗಿದ್ದರು.
ಸಂಸ್ಥೆಯ ಮಾಲಕ ಡಿ.ಎಂ. ಝಾಕಿರ್ ಸ್ವಾಗತಿಸಿದರು. ಉದ್ಯಮಿ ಶಾಫಿ ಕುತ್ತಮೊಟ್ಟೆ ಕಾರ್ಯಕ್ರಮ ನಿರೂಪಿಸಿದರು.
.
Advertisement