ಫೀಫಾ 2022 ಕತ್ತಾರ್ ನಲ್ಲಿ ನಡೆಯುತ್ತಿದ್ದು, ಒಂದಲ್ಲಾ ಒಂದರಲ್ಲಿ ಈ ಮೊದಲು ಕಳೆದು ಹೋದ ವಿಶ್ವ ಕಪ್ ಗಿಂತ ವಿಭಿನ್ನತೆಯನ್ನು ಹೊಂದಿವೆ. ಇದರ ನಡುವೆ ಫ್ಯಾನ್ ಕ್ರೇಝ್ ಹೆಚ್ಚಾಗಿದ್ದು, ಕೇರಳ ಭಾಗದಲ್ಲಿ ಈ ಮೊದಲು ಈ ರೀತಿಯಾದ ಕಟೌಟ್, ಫ್ಲೆಕ್ಸ್ ಗಳು ರಾರಾಜಿಸುತ್ತಿದ್ದರೆ, ಈದೀಗ ಸುಳ್ಯದಲ್ಲೂ ತಲೆ ಎತ್ತಿ ನಿಂತಿದೆ, ಒಂದಲ್ಲ, ಒಟ್ಟಾಗಿ ಮೂರು ಕಟೌಟ್ ಗಳು ಸುಳ್ಯ ನಗರದ ಪ್ರಮುಖ ಬೀದಿಗಳಲ್ಲಿ ಅಳವಡಿಕೆಯಾಗಿವೆ. ವಿಶೇಷತೆ ಏನೆಂದರೆ ಈ ಮೂರು ಕಟೌಟ್ ಗಳು ಪೋರ್ಚುಗಲ್ ತಾರೆ, ಫುಟ್ಬಾಲ್ ಇತಿಹಾಸದಲ್ಲಿ ಅತೀ ಹೆಚ್ಚು ಗೋಲ್ ಬಾರಿಸಿದ ಕ್ರಿಸ್ಟಿಯಾನೊ ರೊನಾಲ್ಡೋ ಇವರದಾಗಿದೆ.

CR7 ಸುಳ್ಯ ವತಿಯಿಂದ ಬರೋಬ್ಬರಿ 36 ಅಡಿಯ ಕಟೌಟ್ ಸುಳ್ಯ ಗಾಂಧಿನಗರ ಪೆಟ್ರೋಲ್ ಪಂಪ್ ಎದುಗಡೆ ಅಳವಡಿಸಲಾಗಿದೆ.

CR7 ಫ್ಯಾನ್ಸ್ ಜಟ್ಟಿಪಳ್ಳ ವತಿಯಿಂದ ಮೊಗರ್ಪಣೆಯ ಎಲಿಮಲೆಕ್ಕಾರ್ಸ್ ಪ್ರಾಪರ್ಟಿ ಸ್ಥಳದಲ್ಲಿ 25 ಅಡಿ ಎತ್ತರದ ಕಟೌಟ್ ಅಳವಡಿಸಲಾಗಿದೆ.

CR7 ಫ್ಯಾನ್ಸ್ ಪೈಚಾರ್ ವತಿಯಿಂದ ಶಾಂತಿನಗರ ತಿರುವಿನ ಬಳಿ 20 ಅಡಿಯ ಕಟೌಟ್ ರಾರಾಜಿಸಿದೆ. ಈ ಪ್ರತಿಯೊಂದು ಕಟೌಟ್ ನ ಕೆಲಸದಲ್ಲಿ ಯಾವುದೇ ಫ್ಯಾನ್ ವಾರ್ ಭಾವ ತೋರಿಸದೆ ಮೆಸ್ಸಿ, ನೈಮರ್ ಫ್ಯಾನ್ಸ್ ಒಗ್ಗಟ್ಟಾಗಿ ಕೈ ಜೋಡಿಸಿದ್ದಾರೆ. ಒಟ್ಟಿನಲ್ಲಿ ಫುಟ್ಬಾಲ್ ಜ್ವರ ತಾರಕಕ್ಕೇರಿದೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ