Advertisement
ಭಾರತ ತಂಡದ ಕ್ರಿಕೆಟಿಗ, ಐಪಿಎಲ್ ನಲ್ಲಿ ಲಕ್ನೋ ಪರವಾಗಿ ಆಡುತ್ತಿರುವ ಆಟಗಾರ ಕೆ .ಎಲ್ ರಾಹುಲ್ ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಇಂದು ಬೆಳಗ್ಗೆ ಭೇಟಿಯತ್ತ ಅವರು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ತೆರಳಿದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಶಾಲು ಹೊದಿಸಿ ಗೌರವಿಸಿದರು. ಹಾಗೂ ದೇಶದಲ್ಲೇ ಹೆಸರುವಾಸಿಯಾಗಿರುವ ಮಂಗಳೂರಿನ ಪ್ರತಿಷ್ಠಿತ ಪಬ್ಬಾಸ್ ಐಸ್ ಕ್ರೀಂ ಸಂಸ್ಥೆಗೆ ಭೇಟಿ ನೀಡಿದ್ದಾರೆ. ಇದನ್ನು ಸ್ವತಃ ಕೆ.ಎಲ್ ರಾಹುಲ್, ಸಾಮಾಜಿಕ ಜಾಲತಾಣ ವಾದ ಇನ್ಸ್ಟಾಗ್ರಾಮ್ ನಲ್ಲಿ, ಚೈಲ್ಡ್ ಹುಡ್ ಬ್ಲಿಸ್ ಎಂದು ತನ್ನ ಬಾಲ್ಯದ ನೆನಪನ್ನು ಹಂಚಿಕೊಂಡಿದ್ದಾರೆ.

Advertisement