ಬೆಂಗಳೂರು ದೆಹಲಿ ಸ್ಕೂಲ್ ನಲ್ಲಿ ಎರಡು ದಿನಗಳ ಅಂತರ್ ಶಾಲಾ ಮಾದರಿ ಸಂಸತ್ತು ಸ್ಪರ್ಧೆ ಹಮ್ಮಿಕೊಳ್ಳಲಾಯಿತು. ಸ್ಪರ್ಧೆಗೆ ಚಾಲನೆ ನೀಡಿದ ಮೀಫ್ ಉಪಾಧ್ಯಕ್ಷ ಮಾತನಾಡಿ ಯು. ಟಿ. ಖಾದರ್ ರವರು ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಆದ ನಂತರ ತನ್ನ ಪರಿಕಲ್ಪನೆ ಯಂತೆ ನೂರಾರು ವಿದ್ಯಾ ಸಂಸ್ಥೆಗಳ ಸಾವಿರಾರು ವಿದ್ಯಾರ್ಥಿ ಗಳು ಅಧಿವೇಶನ ವೀಕ್ಷಣೆ ಮಾಡಿರುವುದು ಇಂತಹ ಕಾರ್ಯಕ್ರಮ ಗಳಿಗೆ ಪ್ರೇರಣೆ ಎಂದರು. ಸಂಪನ್ಮೂಲ ವ್ಯಕ್ತಿ ಅಡ್ವೋಕೇಟ್ ಹರೀಶ್ ರವರು ಮಾತನಾಡಿ ಚರ್ಚೆ ಯ ಸ್ವರೂಪಗಳು ರಚನಾ ತ್ಮಕ ವಾಗಿರಲಿ ಎಂದರು.
ವಿದ್ಯಾ ಸಂಸ್ಥೆಯ ಉಪ ಪ್ರಾoಶುಪಾಲೆ ಪ್ರೀತಿ, ಕಾರ್ಯಕ್ರಮ ಸಂಯೋಜಕರುಗಳಾದ ಸೋಶಿಯಲ್ ಸಯನ್ಸ್ ಮುಖ್ಯಸ್ಥ ಚಂದ್ರಶೇಖರ್ ಶ್ರೀಮತಿ ಹಂಸ ಮೊದಲಾದವರು ಉಪಸ್ಥಿತರಿದ್ದರು. ತೀರ್ಪು ಗಾರರಾಗಿ ಆನಂದ್ ಮತ್ತು ಹರ್ಷಿತ ಭಾಗವಹಿಸಿದ್ದರು.
ಕಾರ್ಯಕ್ರಮದ ಪ್ರಮುಖಾoಶಗಳು
ಪ್ರಾರಂಭದಲ್ಲಿ ಮಾದರಿ ಸಂಸತ್ತಿನ ರಾಷ್ಟ್ರಪತಿಗಳು ಶಿಷ್ಟಾಚಾರದಂತೆ ಆಗಮಿಸಿ ಅಧಿವೇಶನಕ್ಕೆ ಆಗಮಿಸಿದಾ ರಾಷ್ಟ್ರಗೀತೆಯೊಂದಿಗೆ ಪ್ರಾರಂಭಿಸಿ
ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿ ನಿರ್ಗಮಿಸಿದ ನಂತರ ಮಾದರಿ ಲೋಕಸಭೆ ಅಧಿವೇಶನ ಪ್ರಾರಂಭ ಗೊಂಡಿತು. ಆಡಳಿತ ಪಕ್ಷದ ಸದಸ್ಯರಿಂದ ಸರ್ಕಾರ ದ ಜನಪರ ಕಾರ್ಯಕ್ರಮ ಗಳ ಪ್ರಕಟಣೆ
ಪ್ರತಿಪಕ್ಷದ ಸದಸ್ಯರು ಶಿಕ್ಷಣ, ಫಸಲ್ ಭೀಮಾ ಯೋಜನೆ, ತನಿಖಾ ಸಂಸ್ಥೆಗಳಲ್ಲಿ ಹಸ್ತಕ್ಷೇಪ, ಆರ್ಥಿಕತೆ, ಉದ್ಯೋಗ ವಕಾಶ,ಮೊದಲಾದ ವಿಷಯ ಗಳಲ್ಲಿ ಕೇಳಿದ ಪ್ರಶ್ನೆ ಗಳಿಗೆ ಆಡಳಿತ ಪಕ್ಷದ ಕೌನ್ಸಿಲ್ ಮಿನಿಸ್ಟರ್ ಗಳು ಉತ್ತರ ನೀಡಿದರು. ಆತ್ಮ ನಿರ್ಭರ, ಮೇಕ್ ಇನ್ ಇಂಡಿಯಾ, ಅಂತ್ಯೋದಯ ಅನ್ನ ಯೋಜನೆ ಮೊದಲಾದ ಜನ ಪರ ಕಾರ್ಯಕ್ರಮ ಗಳ ಬಗ್ಗೆ ವಿವರಿಸಲಾಯಿತು