ಸುಳ್ಯ: ತಾಲೂಕಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರೆಸ್ ಕ್ಲಬ್ ಕಟ್ಟಡ ಉದ್ಘಾಟನೆಯು ನ.30 ರಂದು ಉದ್ಘಾಟನೆಗೊಳ್ಳಲಿದೆ. ಇದರ ಪ್ರಚಾರಾರ್ಥವಾಗಿ ಸುಳ್ಯದ ಪ್ರಮುಖ ಬೀದಿಗಳಲ್ಲಿ ನ.29 ರಂದು ಬೆಳಿಗ್ಗೆ ಬೈಕ್ ರ್‍ಯಾಲಿಯು ಜರುಗಿತು. ಪೈಚಾರಿನಿಂದ ಆರಂಭಗೊಂಡ ಈ ಬೈಕ್ ರ್‍ಯಾಲಿಗೆ ಎ.ಸಿ.ಎಫ್. ಪ್ರವೀಣ್ ಶೆಟ್ಟಿ ಅವರು ತೆಂಗಿನಕಾಯಿ ಒಡೆಯುವುದರ ಮೂಲಕ ಉದ್ಘಾಟಿಸಿ, ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಕೋಶಾಧಿಕಾರಿ ಯಶ್ವಿತ್ ಕಾಳಂಮನೆ, ಸ್ಥಾಪಕಾಧ್ಯಕ್ಷ ಜೆ.ಕೆ.ರೈ, ಸೇರಿದಂತೆ ಪ್ರೆಸ್ ಕ್ಲಬ್ ನಿರ್ದೇಶಕರುಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. ಬೈಕ್ ರ್‍ಯಾಲಿಯು ಪೈಚಾರಿನಿಂದ ಹೊರಟ ಬೈಕ್ ರ್‍ಯಾಲಿಯು ಹಳೆಗೇಟು, ಜ್ಯೋತಿ ಸರ್ಕಲ್, ಮೂಲಕ ಸುಳ್ಯ ನಗರವನ್ನು ಪ್ರವೇಶಿಸಿ, ಗಾಂಧಿನಗರ, ವಿಷ್ಣುಸರ್ಕಲ್ ಬಳಿ ಸಾಗಿ, ರಥಬೀದಿಯ ಮೂಲಕ ಕೆ.ವಿ.ಜಿ. ಸರ್ಕಲ್, ವಿವೇಕಾನಂದ ಸರ್ಕಲ್ ಮೂಲಕ ಸಾಗಿ ಅಂಬಟೆಡ್ಕದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪ್ರೆಸ್ ಕ್ಲಬ್ ತನಕ ಸಾಗಿ ಬಂದಿತು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ