ಎಸ್ ವೈ ಎಸ್ ಕಾರ್ಯಕರ್ತರ ನಿಶ್ವಾರ್ತ ಸೇವೆ ಶ್ಲಾಘನೀಯ: ತಹಶೀಲ್ದಾರ್ ಮಂಜುನಾಥ್
ಅನೇಕ ವರ್ಷಗಳಿಂದ ಹಲವು ಸಾಮಾಜಿಕ ಕಾರ್ಯಕ್ರಮದಲ್ಲಿ ತೊಡಗಿಸಿಕ್ಕೊಂಡಿರುವ ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ಇದರ ಸುಳ್ಯ ಝೋನ್ ಸಮಿತಿ ವತಿಯಿಂದ ಸಾಂತ್ವನ ಕಾರ್ಯಕರ್ತರಿಗೆ ತರಬೇತಿ ನೀಡುವ ಶಿಬಿರವನ್ನು ಸುಳ್ಯ ಯುವಜನ ಸಂಯುಕ್ತ ಮಂಡಳಿ ಹಾಲ್ ನಲ್ಲಿ ಆ 29 ರಂದು ಹಮ್ಮಿಕೊಳ್ಳಲಾಯಿತು.
ಝೋನ್ ಅಧ್ಯಕ್ಷರಾದ ಎ. ಬಿ. ಅಶ್ರಫ್ ಸ ಅದಿ ಅಧ್ಯಕ್ಷತೆ ವಹಿಸಿದ್ದ ಈ ಶಿಬಿರದಲ್ಲಿ ಸಯ್ಯದ್ ಕುಂಞಿಕೋಯ ತಂಙಳ್ ಸ ಅದಿ ದುಆ ನೆರವೇರಿಸಿ ಹಿತ ವಚನವನ್ನು ನೀಡಿದರು.
ಎಸ್ ವೈ ಎಸ್ ರಾಜ್ಯ ಸಮಿತಿ ಸದಸ್ಯ ಹಮೀದ್ ಬೀಜಕೊಚ್ಚಿ ಶಿಬಿರದ ಉದ್ಘಾಟನೆ ನೆರವೇರಿಸಿದರು.
ಝೋನ್ ಕಾರ್ಯದರ್ಶಿ ಶಂಸುದ್ದೀನ್ ಝಂಝಂ ಸ್ವಾಗತಿಸಿದರು.
ಖ್ಯಾತ ತರಬೇತುದಾರ ನೌಫಲ್ ಮಂಜೇರಿಯವರಿಂದ ಎರಡು ಘಂಟೆಗಳ ಕಾಲ ತರಬೇತಿ ನಡೆದು ಸಂಕಷ್ಟ ಸಮಯದಲ್ಲಿ ಕಾರ್ಯಕರ್ತರ ಸ್ಪಂದನೆ ಹೇಗಿರಬೇಕು ಎಂಬ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸುಳ್ಯ ತಹಶೀಲ್ದಾರ್ ಮಂಜುನಾಥ್ ರವರು ಮುಖ್ಯ ಅತಿಥಿಗಳಾಗಿ ಭಗವಹಿಸಿ ಮಾತನಾಡಿ ಸಂಘಟನೆಯ ಕಾರ್ಯಕರ್ತರ ಸಮಾಜ ಸೇವೆಯ ಬಗ್ಗೆ ಮತ್ತು ಕೊರೋನಾ ಸಮಯದಲ್ಲಿನ ನಿಸ್ವಾರ್ಥ ಸೇವೆ ಮತ್ತು ವಯನಾಡಿನ ದುರಂತದ ಸಮಯದ ಮಾಡಿದ ತ್ವರಿತ ಸೇವೆಗಳನ್ನು ಸ್ಮರಿಸಿ ಶ್ಲಾಘಿಸಿದರು.
ಅಗ್ನಿಶಾಮಕ ಸಿಬ್ಬಂಧಿಗಳು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಮುಖಂಡರುಗಳಾದ ಅಬ್ದುರಝಾಕ್ ಖಾಸಿಮಿ ಕೂರ್ನಡ್ಕ ,ಸ್ವಾಲಿಹ್ ಮುರ,ಇಕ್ಬಾಲ್ ಬಪ್ಪಳಿಗೆ, ,ಅಬ್ದುಲ್ ರಹಮಾನ್ ಮೊಗರ್ಪಣೆ, ಶಂಸುದ್ದೀನ್ ಪಳ್ಳಿಮಜಲು ,ಹಸೈನಾರ್ ಗುತ್ತಿಗಾರ್, ಲತೀಫ್ ಔಹರಿ ಮೇನಾಲ,ಜಮೀಹತುಲ್ ಫಲಾಹ್ ಅಧ್ಯಕ್ಷ ಅಬೂಬಕ್ಕರ್ ಪಾರೆಕಲ್
ಅಶ್ರಫ್ ನೆಲ್ಯಮಜಲು,ಅಬೂಬಕ್ಕರ್ ಜಟ್ಟಿಪಳ್ಳ , ಹನೀಫ್ ಸಖಾಫಿ ಬಳ್ಳಾರೆ, ಲತೀಪ್ ಸಖಾಫಿ ಗೂನಡ್ಕ,ಹನೀಪ ಮದನಿ ಉಸ್ತಾದ್, ಸಮೀರ್ ಮೊಗರ್ಪಣೆ,ಸಿದ್ದೀಕ್ ಗೂನಡ್ಕ, ನೌಶಾದ್ ಕೆರೆ ಮೂಲೆ,ಅಶ್ರಫ್ ಸಾಹುಕಾರ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಅಬ್ದುಲ್ ಹಮೀದ್ ಸುಣ್ಣ ಮೂಲೆ ನಿರ್ವಹಿಸಿ,
ಕೊನೆಯಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರವನ್ನು ಮಾಡಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.