ಫಿರೋಜಾಬಾದ್ : ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವ ಘಟನೆ ಫಿರೋಜಾಬಾದ್‌ನ ಪಾಧಮ್ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

https://www.youtube.com/watch?v=Fz3hk2yKTQs

ರಮಣ್ ಪ್ರಕಾಶ್ ಎಂಬವರು ಜಸ್ರಾನದ ಪಾಧಮ್ ಗ್ರಾಮದಲ್ಲಿ ಪೀಠೋಪಕರಣದ ಶೋರೂಂ ಹೊಂದಿದ್ದು, ಈ ಶೋರೂಂನ ಮೇಲ್ಭಾಗದಲ್ಲಿ ಅವರು ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಇವರ ಅಂಗಡಿಯಲ್ಲಿ ಮಂಗಳವಾರ ರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸಲು ಫಿರೋಜಾಬಾದ್ ಮತ್ತು ಆಗ್ರಾ ಮತ್ತು ಮೈನ್‌ಪುರಿಯಿಂದ ಒಟ್ಟು 18 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಲಾಗಿತ್ತು.ಅಗ್ನಿಯ ರುದ್ರ ನರ್ತನದಿಂದಾಗಿ 9 ಮಂದಿ ಮನೆಯೊಳಗೆ ಸಿಲುಕಿಕೊಂಡಿದ್ದರು. ಮೂರು ಗಂಟೆಗಳ ಪರಿಶ್ರಮದ ನಂತರ ಬೆಂಕಿ ಹತೋಟಿಗೆ ತರಲಾಯಿತು. ಅಷ್ಟರಲ್ಲಾಗಲೇ ಮನೆಯಲ್ಲಿ ಸಿಲುಕಿದ್ದ 3 ಮಕ್ಕಳು ಸೇರಿ ಒಟ್ಟು 6 ಮಂದಿ ಸಜೀವ ದಹನವಾಗಿದ್ದಾರೆ. ಬಾಕಿರುವ ಮೂವರನ್ನು ರಕ್ಷಿಸಲಾಗಿದೆ. ಜಸ್ರಾನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ