ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸರಕಾರಿ ಪ್ರೌಢಶಾಲೆ ದುಗಲಡ್ಕ ದಲ್ಲಿ ಆಗಸ್ಟ್ 30 ರಂದು ನಡೆದ ಸುಳ್ಯ ತಾಲೂಕು ಮಟ್ಟದ ಪ್ರೌಢ ಶಾಲಾ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬಾಲಕರ ತಂಡವು ವಿಜಯಿಯಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಬೆಸ್ಟ್ ಆಲ್ರೌಂಡರ್ ಆಗಿ ಮಹಮ್ಮದ್ ಫೈಸ್ 10ನೇ ತರಗತಿ ವೈಯಕ್ತಿಕ ಬಹುಮಾನ ಪಡೆದರು.ಶಾಲಾ ಸಂಚಾಲಕರಾದ ರೆ. ಫಾ. ವಿಕ್ಟರ್ ಡಿ’ಸೋಜ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ರ ಮಾರ್ಗದರ್ಶನದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕರಾದ ಕೊರಗಪ್ಪ ಬೆಳ್ಳಾರೆ, ಪುಷ್ಪವೇಣಿ ತರಬೇತಿ ನೀಡಿ, ಸಹ ಶಿಕ್ಷಕಿ ಚೇತನ ತಂಡದ ವ್ಯವಸ್ಥಾಪಕರಾಗಿ ಸಹಕರಿಸಿದರು.