ಕಳೆದ ವರ್ಷ ತೆರೆ ಕಂಡ ತೆಲುಗಿನ ‘ಪುಷ್ಪ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ದ ಮಟ್ಟದ ಸದ್ದು ಮಾಡಿತ್ತು. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲೂ ಈ ಸಿನಿಮಾ ಬಿಡುಗಡೆಯಾಗಿತ್ತು. ಸಿನಿಮಾದ ಹಾಡುಗಳು, ಸಿಗ್ನೇಚರ್ ಸೆಪ್ಸ್, ಡೈಲಾಗ್, ಮೇಕಿಂಗ್ ಎಲ್ಲವೂ ಸಿನಿಪ್ರಿಯರಿಗೆ ಸಖತ್ ಇಷ್ಟವಾಗಿತ್ತು. ಚಿತ್ರದ ತಗ್ಗೋದೆ ಇಲ್ಲ ಡೈಲಾಗ್ ಅಂತೂ ಪುಟ್ಟ ಮಕ್ಕಳಿಗೂ ಫೇವರೆಟ್ ಆಗಿದ್ದವು. ಪುಷ್ಪ ತೆರೆ ಕಂಡು ವರ್ಷದ ಬಳಿಕ ಇದೀಗ ರಷ್ಯಾ ಭಾಷೆಯಲ್ಲಿ ತೆರೆ ಕಾಣುತ್ತಿದೆ. ಚಿತ್ರದ ಪ್ರಚಾರಕ್ಕಾಗಿ ಸ್ಟೈಲಿಶ್ ಸ್ಟಾರ್ ನಟ ಅಲ್ಲುಅರ್ಜುನ್, ರಶ್ಮಿಕಾ ಮಂದಣ್ಣ, ನಿರ್ದೇಶಕ ಸುಕುಮಾರ್, ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಹಾಗೂ ಇನ್ನಿತರರು ಇತ್ತೀಚೆಗೆ ರಷ್ಯಾಕ್ಕೆ ತೆರಳಿದ್ದರು. ಹಾಗೂ ರಷ್ಯಾದ ಟಿವಿ ಚಾನೆಲ್‌ನಲ್ಲಿ ಸಂದರ್ಶನ ಕೂಡ ನಡೆಸಿದೆ ಚಿತ್ರ ತಂಡ, ಕೆಲವೇ ದಿನಗಳಲ್ಲಿ ‘ಪುಷ್ಪ’ ಸಿನಿಮಾ ರಷ್ಯನ್ ಭಾಷೆಯಲ್ಲಿ ತೆರೆ ಕಾಣುತ್ತಿದ್ದು ಸಿನಿಮಾ ನೋಡುವಂತೆ ರಷ್ಯನ್ನರಿಗೆ ಮನವಿ ಮಾಡಿದ್ದಾರೆ ಚಿತ್ರತಂಡ.
