Advertisement
ಹತ್ತು ಹಲವು ಹೊಸ ಅನುಭವಗಳೊಂದಿಗೆ ಫೀಫಾ 2022 ಫುಟ್ಬಾಲ್ ವಿಶ್ವ ಕಪ್ ಈಗಾಗಲೇ ಕತ್ತಾರ್ ನಲ್ಲಿ ಪ್ರಾರಂಭವಾಗಿದೆ. ಫುಟ್ಬಾಲ್ ಪ್ರೇಮಿಗಳು ತಮ್ಮ ಇಷ್ಟ ದಾಸರ ಫ್ಲೆಕ್ಸ್, ಕಟೌಟ್ ಗಳು ಹಾಕಿ ತಮ್ಮ ಅಭಿಮಾನವನ್ನು ಹಿಮ್ಮಡಿಗೊಳಿಸಿದ್ದಾರೆ. ಹೀಗೆ ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಕೋಡಿನಲ್ಲಿ ಬರೋಬ್ಬರಿ 120 ಅಡಿ ಎತ್ತರದ ಕಟೌಟ್ ನಿರ್ಮಿಸಿ ದಾಖಲೆ ನಿರ್ಮಿಸಿದ್ದರು.
ಆದರೆ ಅದೀಗ ಕುಸಿತವಾಗಿದೆ ಎಂದು ತಿಳಿದುಬಂದಿದೆ. ಬಾರಿ ಎತ್ತರದ ಬರೋಬ್ಬರಿ 120 ಅಡಿ ಎತ್ತರದ ಹಾಗೂ ಕೇರಳದಲ್ಲಿ ಈವರೆಗೂ ಹಾಕಿದ ಕಟೌಟ್ ಗಳಲ್ಲಿ ಇದುವೇ ಅತ್ಯಂತ ಎತ್ತರವಾಗಿತ್ತು. ಆದರೆ ಇದೀಗ ಕುಸಿತಗೊಂಡಿದೆ. ಈ ಕುಸಿತದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲವೆಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
Advertisement