Advertisement

ಪುತ್ತೂರು: ಪ್ರಥಮ ವರ್ಷದ ಎಂಎಸ್ಸಿ ವಿದ್ಯಾರ್ಥಿನಿ ಭಾರತೀಯ ಗಡಿ ಭದ್ರತಾ ಪಡೆಗೆ (BSF) ಗೆ ಕಾನ್ ಸ್ಟೇಬಲ್ ಆಗಿ ಆಯ್ಕೆಯಾಗಿದ್ದಾರೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ -2021ರಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪುತ್ತೂರಿನ ಕರ್ಕುಂಜ ಮನೆಯ ಲಿಂಗಪ್ಪ ಗೌಡರ ಪುತ್ರಿ ಚೈತ್ರ (21) ಆಯ್ಕೆಯಾಗಿದ್ದಾರೆ. ಚೈತ್ರ ರವರು ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನ ರಾಗಿಕುಮೇರಿ ಶಾಲೆಯಲ್ಲಿ ಪೂರೈಸಿ , ಪ್ರೌಡಶಾಲೆಯನ್ನು ಕೊಂಬೆಟ್ಟು ಜೂನಿಯರ್ ಕಾಲೇಜಿನಲ್ಲಿ ಪೂರೈಸಿದರು. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿಎಸ್ಸಿ ಪೂರ್ತಿಗೊಳಿಸಿದ ಚೈತ್ರ ಪ್ರಥಮ ವರ್ಷದ ಎಂಎಸ್ಸಿ ಓದುತ್ತಿದ್ದಾರೆ.

2021 ರ ನವೆಂಬರ್ ನಲ್ಲಿ ನಡೆದ ಸ್ಟಾಫ್ ಸೆಲೆಕ್ಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಚೈತ್ರ 2022ರ ಡಿಸೆಂಬರ್ 21 ರಂದು ಬೆಂಗಳೂರಿನ ಬಿಎಸ್ಎಫ್ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಬಿಎಸ್ಎಫ್ ಆದೇಶಿಸಿದೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ