ನವದೆಹಲಿ: ಕೊರೊನಾ ವೈರಸ್‌ ಚೀನಾದಲ್ಲಿ ಜನ್ಮತಾಳಿದ ಬಳಿಕ ಇದರ ಬಗ್ಗೆ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಯಾಗಿತ್ತು. ಕೋವಿಡ್‌ ವೈರಸ್‌ ಮಾನವ ನಿರ್ಮಿತ ವೈರಸ್ ಎಂದು ಯುಎಸ್‌ ನಾಯಕರು ಬಹಿರಂಗವಾಗಿ ಚೀನಾವನ್ನು ದೂರಿದ್ದರು. ದುರುದ್ದೇಶದಿಂದ ವೈರಸ್‌ ಸೃಷ್ಟಿಸಿದ್ದ ಚೀನಾದ ಪ್ರಯೋಗಾಲಯದಿಂದ, ವೈರಸ್‌ ಸೋರಿಕೆಯಾಗಿ ಜಾಗತಿಕವಾಗಿ ಹಬ್ಬಿದೆ ಎಂದು ಆರಂಭದಲ್ಲೇ ಆರೋಪ ಮಾಡಿತ್ತು. ಆದರೆ, ಇದನ್ನು ಚೀನಾ ಹಾಗೂ ಜಗತ್ತು ಒಪ್ಪಿಕೊಂಡಿರಲಿಲ್ಲ. ಈಗ ಆ ಆರೋಪಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದಂತಿದೆ. ಹೌದು ಚೀನಾದ ವುಹಾನ್‌ನಲ್ಲಿರುವ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ ಅಮೆರಿಕ ಮೂಲದ ವಿಜ್ಞಾನಿಯೊಬ್ಬರು, ಸದ್ಯ ಆಶ್ಚರ್ಯಕರ ಮಾಹಿತಿ ಬಹಿರಂಗಪಡಿಸಿದ್ದಾರೆ. COVID-19 “ಮಾನವ ನಿರ್ಮಿತ ವೈರಸ್‌” ಎಂದು ಹೇಳಿದ್ದಾರೆ

. ಅಲ್ಲದೆ ಈ ವೈರಸ್‌ ವುಹಾನ್‌ನ ಪ್ರಯೋಗಾಲಯದಿಂದ ಸೋರಿಕೆಯಾಗಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಎರಡು ವರ್ಷಗಳ ಹಿಂದೆ, ಚೀನಾ ಸರ್ಕಾರದ ಅನುದಾನದಿಂದ ನಡೆಯುವ ಸಂಶೋಧನಾ ಪ್ರಯೋಗಾಲಯವಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (WIV)ಯಿಂದ ಕೋವಿಡ್‌ ವೈರಸ್ ಸೋರಿಕೆಯಾಗಿದೆ ಎಂದು ಬ್ರಿಟಿಷ್ ಪತ್ರಿಕೆ ದಿ ಸನ್‌ನಲ್ಲಿ ಯುಎಸ್ ಮೂಲದ ಸಂಶೋಧಕ ಆಂಡ್ರ್ಯೂ ಹಫ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ತಮ್ಮ ಇತ್ತೀಚಿನ ಪುಸ್ತಕವಾದ, “ದಿ ಟ್ರೂತ್ ಅಬೌಟ್ ವುಹಾನ್”ನಲ್ಲಿ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಫ್ ಅವರು, ಚೀನಾದಲ್ಲಿ ಯುಎಸ್ ಸರ್ಕಾರವು ಧನಸಹಾಯ ನೀಡಿದ್ದರಿಂದ ಸಾಂಕ್ರಾಮಿಕ ರೋಗವು ಉಂಟಾಗಿದೆ ಎಂದು ಹೇಳಿದ್ದಾರೆ. ಯುಕೆ ಮೂಲದ ಟ್ಯಾಬ್ಲಾಯ್ಡ್ ದಿ ಸನ್‌ನಲ್ಲಿ ಹಫ್‌ ಅವರ ಪುಸ್ತಕದ ಆಯ್ದ ಭಾಗಗಳು ಪ್ರಕಟಗೊಂಡಿವೆ. ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಹಫ್ ಅವರು ಸಾಂಕ್ರಾಮಿಕ ರೋಗಗಳನ್ನು ಅಧ್ಯಯನ ಮಾಡುವ ನ್ಯೂಯಾರ್ಕ್ ಮೂಲದ ಲಾಭರಹಿತ ಸಂಸ್ಥೆಯಾದ ಇಕೋಹೆಲ್ತ್ ಅಲೈಯನ್ಸ್‌ನ ಮಾಜಿ ಉಪಾಧ್ಯಕ್ಷರಾಗಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಚೀನಾದ ಗೇನ್ ಆಫ್ ಫಂಕ್ಷನ್ ಪ್ರಯೋಗಗಳನ್ನು ಅಸಮರ್ಪಕ ಭದ್ರತೆಯೊಂದಿಗೆ ನಡೆಸಲಾಗಿದೆ. ಇದರ ಪರಿಣಾಮವಾಗಿ ವುಹಾನ್ ಲ್ಯಾಬ್‌ನಲ್ಲಿ ವೈರಸ್‌ ಸೋರಿಕೆಯಾಗಿದೆ ಎಂದು ಹಫ್ ತನ್ನ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ವುಹಾನ್ ಲ್ಯಾಬ್‌ನಲ್ಲಿ ಕೋವಿಡ್‌ ಮೂಲದ ಬಗ್ಗೆ ಬಿಸಿ ಬಿಸಿ ಚರ್ಚೆಗಳಾಗಿವೆ. ಆದರೆ, ಚೀನಾದ ಸರ್ಕಾರಿ ಅಧಿಕಾರಿಗಳು ಮತ್ತು ಲ್ಯಾಬ್ ಕೆಲಸಗಾರರು ವೈರಸ್ ಲ್ಯಾಬ್‌ನಲ್ಲಿ ಹುಟ್ಟಿಕೊಂಡಿದೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಸರಿಯಾದ ಜೈವಿಕ ಸುರಕ್ಷತೆ ಮತ್ತು ಅಪಾಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ವಿದೇಶಿ ಪ್ರಯೋಗಾಲಯಗಳು ಸಾಕಷ್ಟು ನಿಯಂತ್ರಣ ಕ್ರಮಗಳನ್ನು ಕೈಗೊಂಡಿಲ್ಲ. ಅಂತಿಮವಾಗಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಲ್ಯಾಬ್ ಸೋರಿಕೆಗೆ ಕಾರಣವಾಯಿತು” ಎಂದು ಆಂಡ್ರ್ಯೂ ಹಫ್ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲ, ಸಂಸ್ಥೆಯು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (NIH)ನ ಧನಸಹಾಯದೊಂದಿಗೆ ಬಾವಲಿಗಳಲ್ಲಿ ಕೊರೊನಾ ವೈರಸ್‌ಗಳನ್ನು ಅಧ್ಯಯನ ಮಾಡುತ್ತಿದೆ. ಇದು ವುಹಾನ್ ಲ್ಯಾಬ್‌ನೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ