ಸುಳ್ಯ ಅನ್ಸಾರಿಯ ಎಜುಕೇಶನಲ್ ಸೆಂಟರ್ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಮಹಿಳಾ ಶರೀಅತ್ ಕಾಲೇಜ್ ಇದರ ವಿದ್ಯಾರ್ಥಿನಿಗಳಿಗೆ ಪ್ರಥಮ ಬಾರಿಗೆ ನುಸ್ರಿಯಾ ಸನದುಧಾನ ಪ್ರಧಾನ ಕಾರ್ಯಕ್ರಮ ನಾವೂರು ಅನ್ಸಾರಿಯ ಸಭಾಂಗಣದಲ್ಲಿ ಇಂದು ನಡೆಯಿತು.
ಕಳೆದ ಮೂರು ವರ್ಷಗಳಿಂದ ಅನ್ಸಾರಿಯ ಮಹಿಳಾ ಶರೀಅತ್ ಕಾಲೇಜಿನಲ್ಲಿ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ವಿದ್ಯಾಭ್ಯಾಸವನ್ನು ಪೂರೈಸಿದ ವಿದ್ಯಾರ್ಥಿನಿಯರಿಗೆ ಈ ಸನದು ದಾನ ನೀಡಲಾಯಿತು.
ಸುಳ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಸನದುದಾನ ಕಾರ್ಯಕ್ರಮ ಇದಾಗಿದ್ದು ಜಟ್ಟಿಪಳ್ಳ ನಿವಾಸಿ ಹನೀಫ್ ರವರ ಪುತ್ರಿ ನಬೀಸತ್ ತಬಶೀರಾ, ಕುಂಭಕೋಡು ನಿವಾಸಿ ಇಬ್ರಾಹಿಂ ರವರ ಪುತ್ರಿ ಆಯಿಸತ್ ಸಫ್ರೀನಾ , ಜಟ್ಟಿಪಳ್ಳ ನಿವಾಸಿ ಎಸ್ ಎಂ ಇಸ್ಮಾಯಿಲ್ ರವರ ಪುತ್ರಿ ಫಾತಿಮತ್ ತೌಫೀರಾ, ಶಾಂತಿನಗರ ನಿವಾಸಿ ಕೆ ಇಸಾಕ್ ರವರ ಪುತ್ರಿ ಫಾತಿಮತ್ ಹಿಫ್ನ ಕೆ, ಈ ನಾಲ್ಕು ಮಂದಿ ವಿದ್ಯಾರ್ಥಿನಿಗಳು ಇಂದು ಸನದು ಸ್ವೀಕರಿಸಿದರು.


ಮಹಿಳಾ ಸಭಾ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಸಯ್ಯಿದತ್ ತಾಹಿರಾ ಬೀಬಿ ವಿದ್ಯಾರ್ಥಿನಿಗಳಿಗೆ ಸನದು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಗಾಂಧಿನಗರ ಜುಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಕಾಫಿ ಸನದುದಾನದ ಮುಖ್ಯ ಪ್ರಭಾಷಣವನ್ನು ಮಾಡಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ಸೈಯದ್ ಕುಂಞಿ ಕೋಯಾ ತಂಗಳ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಸ್ಥಳೀಯ ಮಸೀದಿ ಖತೀಬರಾದ ಉಮ್ಮರ್ ಮುಸ್ಲಿಂ ಮರ್ದಾಳ, ಸಯ್ಯದ್ ಉಸೈನ್ ಪಾಷಾ ಸಹದಿ, ಸಂಸ್ಥೆಯ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ, ಮುಖಂಡರುಗಳಾದ ಅಬ್ದುಲ್ ಹಮೀದ್ ಬೀಜಕೊಚ್ಚಿ,ಮುಅಲ್ಲಿಮ್ಮರು ಗಳಾದ ನೌಶಾದ್ ಮದನಿ,ಅಬೂಬಕ್ಕರ್ ಹಿಮಮಿ, ಮುಖ್ಯ ಶಿಕ್ಷಕರಾದ ಅಬ್ದುಲ್ ರಹಿಮಾನ್, ಇಕ್ಬಾಲ್ ಎಲಿಮಲೆ, ಹಾಜಿ ಶುಕೂರ್, ಇಸ್ಮಾಯಿಲ್ ಹಾಜಿ, ಹಸನ್ ಹಾಜಿ ಬಾಳೆಮಕ್ಕಿ, ಶಾಫಿ ಕುತ್ತಮಟ್ಟೆ, ರಿಯಾಜ್ ಕಟ್ಟೆಕ್ಕರ್ಸ್,ಹಾಜಿ ಅಬ್ದುಲ್ಲ ಕಟ್ಟೆಕ್ಕರ್ಸ್,ಎಸ್ ಎಂ ಅಬ್ದುಲ್ ಹಮೀದ್, ಅಬ್ದುಲ್ ಖಾದರ್ ಪಟೇಲ್, ಎಸ್ ಪಿ ಹಮೀದ್,ಶಹೀದ್ ಪಾರೆ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಕಲಾ ಶಿಕ್ಷಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಂಜುನಾಥ್ ಬೀರಮಂಗಲ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಶಿಕ್ಷಕ ಅಡ್ವಕೇಟ್ ಅಬ್ದುಲ್ಲಾ ಸಕಾಫಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ