Advertisement
ಪುತ್ತೂರು: ಡಿ.೫ ರಂದು ಸಂಜೆ ಕೆಮ್ಮಾಯಿ ಬಳಿ ಕೆಎಸ್’ಆರ್’ಟಿಸಿ ಬಸ್‌ನಿಂದ ಪ್ರಯಾಣಿಕರೊಬ್ಬರು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಕೆದಿಲ ಗ್ರಾಮದ ಮುದ್ರಾಜೆ ನಿವಾಸಿ ಪ್ರಸ್ತುತ ಕೆಮ್ಮಾಯಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸೋಮಪ್ಪ ನಾಯ್ಕ ಎಂಬವರು ಮೃತಪಟ್ಟವರು ಎಂದು ಗುರುತಿಸಲಾಗಿದೆ. ಅವರು ಪುತ್ತೂರಿನಿಂದ ಉಪ್ಪಿನಂಗಡಿ ಹಳೆನೇರಂಕಿ ಕಡೆ ಪ್ರಯಾಣಿಸುತ್ತಿದ್ದು, ಕೆಮ್ಮಾಯಿ ಬಳಿ ಬಸ್ ನಿಲುಗಡೆ ವೇಳೆ ಬಸ್‌ನಿಂದ ಬಿದ್ದು ತೀವ್ರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತ್ತಾದರೂ ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.
Advertisement