ಮುಹಿಯದ್ದೀನ್ ಜುಮಾ ಮಸೀದಿ ಕಲ್ಲುಗುಂಡಿಯಲ್ಲಿ ಪುಣ್ಯ ಪ್ರವಾದಿ ಮುಹಮ್ಮದ್ ನಬಿ (ಸ )ರ ಮಿಲಾದುನ್ನೆಬಿ ಕಾರ್ಯಕ್ರಮದ ಲೋಗೋ ಪ್ರಕಾಶನ ಮತ್ತು ಗ್ರೂಪ್ ಲೀಡರ್ ಗಳಿಗೆ ಫ್ಲಾಗ್ ಹಸ್ತಾಂತರದೊಂದಿಗೆ ಉದ್ಘಾಟನೆಗೊಂಡಿತು. ಮಸೀದಿ ಅಧ್ಯಕ್ಷರಾದ ಜನಾಬ್ ಎಸ್. ಆಲಿ ಹಾಜಿ ಹಾಗೂ ಮಸೀದಿ ಖತೀಬ್ ನಾಸಿರ್ ದಾರಿಮಿ ಉಸ್ತಾದ್ ರು ಲೋಗೋ ಪ್ರಕಾಶನ ನೆರವೇರಿಸಿದರು.
ಮಸೀದಿ ಜಮಾಅತ್ ಉಪಾಧ್ಯಕ್ಷರಾದ ಜನಾಬ್ ಮುಹಮ್ಮದ್ ತಾಜ್ ಎಸ್. ಕೆ, ಮಾಜಿ ಅಧ್ಯಕ್ಷರಾದ ಜನಾಬ್ ಅಬ್ಬಾಸ್ ಹಾಜಿ ಸಂತ್ಯಾರ್, ಸಿರಾಜುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷರಾದ ಜನಾಬ್ ಇಬ್ರಾಹಿಂ ಎ. ಕೆ ಯವರು ಗ್ರೂಪ್ ಲೀಡರ್ ಗಳಿಗೆ ಧ್ವಜ ಹಸ್ತಾಂತರ ಗೈದರು.
ಕಾರ್ಯಕ್ರಮ ದಲ್ಲಿ ಮಸೀದಿ ಪ್ರಧಾನ ಕಾರ್ಯದರ್ಶಿ ಜನಾಬ್ ಇರ್ಷಾದ್ ಬದ್ರಿಯಾ, ಕಾರ್ಯದರ್ಶಿ ಜನಾಬ್ ಹನೀಫ್ ಚಟ್ಟೆಕಲ್ಲು, ಉಸ್ತಾದ್ ರುಗಳಾದ ಜನಾಬ್ ಸಾಜೀದ್ ಅಝ್ಹರಿ, ಜನಾಬ್ ಇಬ್ರಾಹಿಂ ವಾಹ್ಬಿ, ಜನಾಬ್ ಆರಿಫ್ ಮದನಿ, ಹಿರಿಯರಾದ ಜನಾಬ್ ಅಬ್ದುಲ್ಲ, ಅಬ್ಬಾಸ್ ಎಂ. ಎಂ ರವರು ಉಪಸ್ಥಿತರಿದ್ದರು.. ಸಿಹಿ ವಿತರಣೆ ಯೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು. ಮಸೀದಿ ಯ ಸದರ್ ಮುಹಲ್ಲಿಮ್ ಉಸ್ತಾದ್ ಸೈದ್ ಫೈಝಿ ಕಾರ್ಯಕ್ರಮ ನಿರೂಪಿಸಿದರು. ಇಸುಬು ಕಲ್ಲುಗುಂಡಿ ಛಾಯಾಗ್ರಹಣ ನೆರವೇರಿಸಿದರು