Advertisement
ತಿರುವನಂತಪುರ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧಿಕೃತ ನಿವಾಸವಾದ ಕ್ಲಿಫ್ ಹೌಸ್‌ನಲ್ಲಿ ಮಂಗಳವಾರ ಬೆಳಗ್ಗೆ ಗುಂಡಿನ ಸದ್ದು ಕೇಳಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪಿಟಿಐ ವರದಿ ನೀಡಿರುವ ಪ್ರಕಾರ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧಿಕೃತ ನಿವಾಸ ಕ್ಲಿಫ್ ಹೌಸ್‌ನಲ್ಲಿ ಭದ್ರತಾ ಅಧಿಕಾರಿ ಒಬ್ಬರ ಸರ್ವೀಸ್ ವೆಪನ್ ಅಚಾನಕ್ ಆಗಿ ಫೈರ್ ಆಗಿದೆ. ಭದ್ರತಾ ಅಧಿಕಾರಿ ತನ್ನ ಪಿಸ್ತೂಲ್ ಅನ್ನು ಕ್ಲೀನ್ ಭರದಲ್ಲಿ ಗೊತ್ತಾಗದೆ ಫೈರ್ ಆಗಿದೆ

ಈ ಅನಾಹುತದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಮ್ಯೂಸಿಯಂ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ. ಈ ಘಟನೆಯಲ್ಲಿ ಯಾರಿಗೂ ಹಾನಿ ಆಗಿಲ್ಲ. ಭದ್ರತಾ ಅಧಿಕಾರಿಯ ಪಿಸ್ತೂಲ್‌ನಿಂದ ಗುಂಡು ಹಾರಿದ ಘಟನೆಯು ಇಂದು ಬೆಳಗ್ಗೆ 9.15ರ ಸುಮಾರಿಗೆ ಆಗಿತ್ತು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
Advertisement