Advertisement

ಸುಳ್ಯ ನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆಸಿಕೊಂಡು ಬರುತ್ತಿರುವ ‘ಅಮರ ಸುಳ್ಯ ರಮಣೀಯ ಸುಳ್ಯ ಜನಜಾಗೃತಿ ಹಾಗೂ ಶ್ರಮದಾನ ಸ್ವಚ್ಛತಾ ಅರಿವು ಮೂಡಿಸುವ ಇಂದಿನ ಕಾರ್ಯಕ್ರಮ ಸುಳ್ಯದ ಓಡಬಾಯಿ ಪರಿಸರದಲ್ಲಿ ನಡೆಯಿತು. ಈ ಒಂದು ಕಾರ್ಯಕ್ಕೆ ಮಾಂಡೋವಿ ಮೋಟಾರು ಸಂಸ್ಥೆ ಜೊತೆಗೂಡಿ ಸಹಕಾರ ನೀಡಿತು.

ಇಂದು ಸ್ವಚ್ಛತಾ ಅಭಿಯಾನ ಕಸ್ತೂರಿ ನರ್ಸರಿ ಪರಿಸರದಿಂದ ಆರಂಭಗೊಂಡ ಸ್ವಚ್ಛತೆ ತೂಗು ಸುಳ್ಯ ಒಡಬಾಯಿ ತೂಗುಸೇತುವೆಯವರೆಗೆ ನಡೆಯಿತು. ಇಂದಿನ ಅಭಿಯಾನದಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಮುಖ್ಯ ಅಧಿಕಾರಿ ಡಾ.ಸುಧಾಕರ್, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ, ನಗರ ಪಂಚಾಯತ್ ಸದಸ್ಯ ಬುದ್ಧ ನಾಯ್ಕ್, ನಾಮನಿರ್ದೇಶಕ ಸದಸ್ಯ ರೋಹಿತ್ ಕೊಯಿಂಗೋಡಿ, ಮಾಂಡೋವಿ ಮೋಟಾರ್ಸ್ ಸುಳ್ಯ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಸುರೇಶ್ ಭಟ್, ಸರ್ವಿಸ್ ವಿಭಾಗದ ಮುಖ್ಯಸ್ಥ ಸುದೇಶ್ ಜೈನ್ ಹಾಗೂ ಸಿಬ್ಬಂದಿ ವರ್ಗದವರು, ರೋ. ಪ್ರಭಾಕರ್ ನಾಯರ್ ಮಧುವನ, ವಿಲಿಯಂ ಲಸ್ರಾದೋ, ದಾಮೋದರ ಮಂಚಿ, ಲತಾ, ದೇವಿಪ್ರಸಾದ್ ಕುದ್ಪಾಜೆ, ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ, ರೂಪ ಬಾರ್ ಮಾಲಕ ಸುಂದರ ರಾವ್, ಸುಳ್ಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಆರೋಗ್ಯ ಇಲಾಖೆಯ ಶ್ರೀಮತಿ ಪ್ರಮೀಳಾ, ಎಎಂ ಭಟ್ ಜೂನಿಯರ್ ಕಾಲೇಜ್, ಸುಳ್ಯ ಶ್ರೀ ಶಾರದಾಂಬ ಸೇವಾ ಸಮಿತಿ ಅಧ್ಯಕ್ಷ ಚಿದಾನಂದ ವಿನೋಬನಗರ, ಶ್ರೀಮತಿ ಶ್ರೀದೇವಿ ನಾಗರಾಜ ಭಟ್, ಉಪನ್ಯಾಸಕ ಸಂಜೀವ ಕುದ್ಪಾಜೆ, ವರ್ತಕರ ಸಂಘದ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಎಸ್ ವೈ, ಚಂದ್ರಶೇಖರ ಪಿ ಆರ್ ವರ್ತಕರ ಸಂಘದ ಸದಸ್ಯರು, ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರು,ಎನ್ ಎಂ ಸಿ ಶಾಲಾ ವಿದ್ಯಾರ್ಥಿಗಳು, ರೋಟರಿ ಕ್ಲಬ್ ಸುಳ್ಯ, ರೋಟರಿ ಕ್ಲಬ್ ಸುಳ್ಯ ಸಿಟಿ, ಜಯನಗರ ಜೇನುಗೂಡು ತಂಡದ ಸದಸ್ಯರು, ಲಯನ್ಸ್ ಕ್ಲಬ್ ಸುಳ್ಯ, ನಗರ ಪಂಚಾಯತ್ ಸಿಬ್ಬಂದಿ ವರ್ಗದವರು, ಪೌರಕಾರ್ಮಿಕರು, ಕಾರ್ಮಿಕ ಸಂಘದ ಪದಾಧಿಕಾರಿಗಳು, ಇನ್ನು ಹಲವಾರು ಸಂಘ ಸಂಸ್ಥೆಗಳ ಒಟ್ಟು ನೂರಕ್ಕೂ ಹೆಚ್ಚು ಮಂದಿ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ 7ರಿಂದ 8 ಗಂಟೆಯ ತನಕ ಶ್ರಮದಾನ ಕಾರ್ಯಕ್ರಮ ನಡೆದು ಮಾಂಡೋವಿ ಮೋಟಾರ್ಸ್ ಸಂಸ್ಥೆಯ ಪ್ರಯೋಜಕತ್ವದಲ್ಲಿ ಬೆಳಗ್ಗಿನ ಉಪಹಾರದೊಂದಿಗೆ ಇಂದಿನ ಕಾರ್ಯಕ್ರಮ ಕೊನೆಗೊಳಿಸಲಾಯಿತು. ಮುಂದಿನ ಗುರುವಾರದಂದು ತೂಗು ಸೇತುವೆ ಬಳಿಯಿಂದ ಪೈಚಾರ್ ವರೆಗೆ ಅಭಿಯಾನ ನಡೆಯಲಿದ್ದು ಎಲ್ಲಾ ಸಂಘ ಸಂಸ್ಥೆಗಳು ಸಾರ್ವಜನಿಕರು ಕೈಜೋಡಿಸುವಂತೆ ಸಂಘಟಕರು ತಿಳಿಸಿದ್ದಾರೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ