ಎನ್ನೆಂಸಿ, ನೆಹರು ಮೆಮೋರಿಯಲ್ ಕಾಲೇಜಿನ ೨೦೨೪-೨೫ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ಮಾರ್ಗದರ್ಶನದಲ್ಲಿ ಸರ್ವಾನುಮತದಿಂದ ಆರಿಸಲಾಯಿತು.


ತರಗತಿ ಪ್ರತಿನಿಧಿಗಳು ಸೂಚಿಸಿದ ಅಂತಿಮ ಬಿ.ಕಾಂ ಪದವಿಯ ಆದಿತ್ಯ ಡಿ.ಕೆ ನಾಯಕನಾಗಿ, ಅಂತಿಮ ಬಿ.ಎ ಪದವಿಯ ಗಾನ ಬಿ.ಡಿ ಉಪನಾಯಕಿಯಾಗಿ, ಅಂತಿಮ ಬಿ.ಬಿ.ಎ ಪದವಿಯ ಸೂರ್ಯದರ್ಶನ್ ಪಿ.ಎ ಕಾರ್ಯದರ್ಶಿಯಾಗಿ ಮತ್ತು ಅಂತಿಮ ಬಿ.ಎಸ್ಸಿ ಪದವಿಯ ಉಜಾನ ಕೆ ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಅಂತಿಮ ಬಿ.ಎಸ್.ಡಬ್ಲು ದಕ್ಷಯ್ ಡಿ.ಎಸ್ ಮತ್ತು ಅಂತಿಮ ಬಿಬಿಎಯ ಅಂಬಿಕಾ.ಎ ಹಾಗೂ ಕ್ರೀಡಾ ಕಾರ್ಯದರ್ಶಿಗಳಾಗಿ ಅಂತಿಮ ಬಿಎ ಶಶಾಂಕ್.ಪಿ.ವಿ ಮತ್ತು ಅಂತಿಮ ಬಿ.ಕಾಂನ ತೃಪ್ತಿ.ಪಿ ಆಯ್ಕೆಗೊಂಡರು.
ಕಾಲೇಜಿನ ಕಿರು ಸಭಾಂಗಣದಲ್ಲಿ ನಡೆದ ಈ ಆಯ್ಕೆ ಪ್ರಕ್ರೀಯೆಯಲ್ಲಿ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ ಎಂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ, ನ್ಯಾಕ್ ಸಂಯೋಜಕಿ ಡಾ. ಮಮತಾ ಕೆ ಎಲ್ಲಾ ವಿಭಾಗಗಳ ಮುಖ್ಯಸ್ಥರು ಮತ್ತು ತರಗತಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ನೂತನವಾಗಿ ಆಯ್ಕೆಗೊಂಡ ವಿದ್ಯಾರ್ಥಿಸಂಘದ ಪದಾಧಿಕಾರಿಯಾಗಿ ಕಾಲೇಜು ಆಡಳಿತಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಶುಭ ಹಾರೈಸಿದರು.

Leave a Reply

Your email address will not be published. Required fields are marked *