Advertisement
ಸುಬ್ರಹ್ಮಣ್ಯ- ಗುಂಡ್ಯ ರಸ್ತೆಯ ದೇರಣೆ ಬಳಿ ಕಾಡಿನಲ್ಲಿ ದನದ ತಲೆ ಹಾಗೂ ಕಾಲು ಪತ್ತೆಯಾಗಿದ್ದು, ಶಿರಾಡಿ ಮತ್ತು ಸಿರಿಬಾಗಿಲು ಭಜರಂಗದಳ ಕಾರ್ಯಕರ್ತರು ಇದನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಂತಹ ನೀಚ ಕೃತ್ಯವೆಸಗಿದವರನ್ನು ಪತ್ತೆ ಹಚ್ಚಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ವಿ.ಹಿಂ.ಪ. ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ಹಾಗೂ ಭಜರಂಗದಳ ಕಡಬ ಪ್ರಖಂಡ ಸಂಯೋಜಕ ಮನೋಜ್ ಖಂಡಿಗ ತಿಳಿಸಿದ್ದಾರೆ.
Advertisement