ಕತಾರ್: ಕತ್ತಾರ್ ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಂಟ್ವಾಳದ ಕಂಚಿನಡ್ಕ ಪದವು ಸಮೀಪದ ಚಟ್ಟೆಕಲ್ಲಿನ ಮೂಲದ ಯುವಕ ಫಹದ್ ಮೃತಪಟ್ಟಿರುವ ಖೇದಕರ ಘಟನೆ ನಡೆದಿದೆ.


ಈ ಹಿಂದೆ ಒಂದು ವರ್ಷ ಸೌದಿ ಅರೇಬಿಯಾದಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸಿದ್ದ ಫಹದ್ ಕೊರೋನಾ ಕಾರಣದಿಂದ ಊರಿಗೆ ಬಂದು ಒಂದು ವರ್ಷ ಕಾಲ ಊರಿನಲ್ಲೇ ಚಾಲಕ ವೃತ್ತಿ ಮುಂದುವರಿಸಿದ್ದನು. ಬಳಿಕ ಕಳೆದ ಐದು ತಿಂಗಳ ಹಿಂದೆ ಕೆಲಸಕ್ಕಾಗಿ ಕತಾರಿಗೆ ತೆರಳಿದ್ದರು. ಮಂಗಳವಾರ ರಾತ್ರಿ ಅಪಘಾತ ನಡೆಯುವ ಸ್ವಲ್ಪ ಮುಂಚೆಯಷ್ಟೆ ದೂರವಾಣಿ ಕರೆ ಮಾಡಿ ಮನೆ ಮಂದಿ ಜೊತೆ ಮಾತನಾಡಿದ್ದರು ಎಂದು ತಿಳಿದು ಬಂದಿದೆ. ಆ ಬಳಿಕ ಅಪಘಾತದ ಸುದ್ದಿ ಕೇಳಿ ಮನೆ ಮಂದಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಫಹದ್ ಅವರ ತಂದೆಯೂ ಟಿಪ್ಪರ್ ಚಾಲಕನಾಗಿ ದುಡಿದು ಜೀವನ ಸಾಗಿಸುತ್ತಿದ್ದಾರೆ. ಫಹದ್ ತಂದೆ , ತಾಯಿ ಹಾಗೂ ತಮ್ಮನನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ