ಬಾಲಿವುಡ್​ನ ಮಿಸ್ಟರ್​ ಪರ್ಫೆಕ್ಟ್​ ಎಂದೇ ಗುರುತಿಸಿಕೊಂಡಿರುವ ನಟ ಆಮಿರ್​ ಖಾನ್ (Aamir Khan)​ . ಹಿಂದೂ ಸಂಪ್ರದಾಯದಂತೆ ಆಮಿರ್​ ಖಾನ್ ಮತ್ತು ಮಾಜಿ ಪತ್ನಿ ಕಿರಣ್ ರಾವ್​ ಪೂಜೆ ಮಾಡಿರುವ ಫೋಟೋಗಳು ವೈರಲ್​ ಆಗಿವೆ. ಸದ್ಯ ನಟ ಆಮಿರ್​ ಖಾನ್ ಇತ್ತೀಚೆಗೆ ತಮ್ಮ ಪ್ರೊಡಕ್ಷನ್​ ಸಂಸ್ಥೆಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿದ್ದಾರೆ. ಆಮಿರ್​ ಖಾನ್​ ಪೂಜೆ ಮಾಡುತ್ತಿರುವ

ಫೋಟೋಗಳನ್ನು ‘ಲಾಲ್ ಸಿಂಗ್​ ಛಡ್ಡಾ’ ನಿರ್ದೇಶಕ ಅದ್ವೈತ್ ಚಂದನ್ ಅವರು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಗುರುವಾರ (ಡಿ,7) ಹಂಚಿಕೊಂಡಿದ್ದಾರೆ. ಆಮಿರ್​ ಖಾನ್ ಅವರು ಹಣೆಗೆ ತಿಲಕ, ತಲೆಗೆ ಬಿಳಿ ಬಣ್ಣದ ಟೋಪಿ ಧರಿಸಿದ್ದು, ಕಲಶಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾಜಿ ಪತ್ನಿ ಕಿರಣ್​ ರಾವ್​ ಅವರು ಕೂಡ ಭಾಗವಹಿಸಿದ್ದರು. ಇತ್ತೀಚೆಗೆ ಆಮಿರ್​​ ಖಾನ್​ ಮಾಧ್ಯಮದವರೊಂದಿಗೆ ಮಾತನಾಡಿದ್ದು, ‘ನಾನು ಸದ್ಯಕ್ಕೆ ಚಿತ್ರರಂಗದಿಂದ ದೂರಿ ಉಳಿದಿದ್ದೇನೆ. ಯಾವುದೇ ಸಿನಿಮಾ ಕೆಲಸ ಮಾಡುತ್ತಿಲ್ಲ. ಒಂದು ವರ್ಷದ ನಂತರ ನಾನು ಮತ್ತೆ ನಟನೆಗೆ ಮರಳುತ್ತೇನೆ. ಸದ್ಯ ನನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದೇನೆ’ ಎಂದು ‘ಸಲಾಮ್ ವೆಂಕಿ’ ಚಿತ್ರದ ಪ್ರೀಮಿಯರ್​ ಶೋ ವೇಳೆ ಹೇಳಿದ್ದಾರೆ. ನಟಿ ಕಾಜೋಲ್​​ ಮತ್ತು ವಿಶಾಲ್ ಜೇತ್ವಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ ಚಿತ್ರ ‘ಸಲಾಮ್ ವೆಂಕಿ’. ಈ ಚಿತ್ರದಲ್ಲಿ ನಟ ಆಮಿರ್​​ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ