ಸುಳ್ಯ: ವಿವಾಹಿತ ಮಂಗಳೂರು ಮೂಲದ ಯುವಕನೋರ್ವ ಬೇರೆ ಯುವತಿಯೊಂದಿಗೆ ಸುಳ್ಯದ ಗಾಂಧಿನಗರ ಲಾಡ್ಜಿಗೆ ಬಂದು ತಂಗಿದ್ದಾರೆ ಎನ್ನುವ ವಿಷಯ ತಿಳಿದ ಯುವಕನ ಪತ್ನಿ ಡಿ.11ರಂದು ಸಂಜೆ ಸುಳ್ಯಕ್ಕೆ ಬಂದು ಅವರು ತಂಗಿದ್ದ ಲಾಡ್ಜ್ ಮುಂಭಾಗ ಬಂದು ಬೀದಿರಂಪ ಮಾಡಿದ ಘಟನೆ ವರದಿಯಾಗಿದೆ. ಲಾಡ್ಜ್‌ನ ರಿಸೆಪ್ಷನ್ ಬಳಿ ತನ್ನ ಪತ್ನಿ ಬಂದು ನಿಂತಿರುವ ವಿಷಯ ತಿಳಿದು, ಪ್ರೇಯಸಿಯೊಂದಿಗೆ ಆ ಯುವಕ ಲಾಡ್ಜ್ ನಿಂದ ಹೊರಗೆ ಬಂದಿದ್ದಾರೆ. ಇವರು ಬರುವುದನ್ನು ಕಾಯುತ್ತಿದ್ದ ಆತನ ಹೆಂಡತಿ ರಸ್ತೆಯಲ್ಲಿ ಗಂಡನನ್ನು ಮತ್ತು ಆ ಯುವತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾಳೆ. ಈ ಮಹಿಳೆಯ ರಂಪಾಟದಕ್ಕೆ ನೂರಾರು ಜನ ಸ್ಥಳದಲ್ಲಿ ಜಮಾಯಿಸಿದರು. ಕೋಪಗೊಂಡಿದ್ದ ಪತ್ನಿಯನ್ನು ಸಮಾಧಾನಪಡಿಸಲು ಯುವಕ ಎಷ್ಟೇ ಪ್ರಯತ್ನ ಪಟ್ಟರೂ ಆತನಿಗೆ ಸಾಧ್ಯವಾಗಲಿಲ್ಲ.

ಪತಿಯನ್ನು ಮತ್ತು ಆ ಯುವತಿಯನ್ನು ರಸ್ತೆಯಲ್ಲಿ ಎಳೆದಾಡಿ, ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ ಮಹಿಳೆ ಆ ಯುವತಿಯನ್ನು ಹಿಡಿದು ನಿಲ್ಲಿಸಿ ತನ್ನ ಕೋಪವನ್ನು ಹೊರ ಹಾಕುತ್ತಿದ್ದರು.‌ಕೊನೆಗೆ ಪೊಲೀಸರಿಗೆ ವಿಷಯ ತಿಳಿದು ಅವರು ಬಂದು ಮೂವರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *