ಸುಳ್ಯ ಸೆ.12 : ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ನೂತನ ವಕ್ಫ್ ಬಿಲ್ ಇದರ ಕುರಿತು ಅಭಿಪ್ರಾಯ ತಿಳಿಸಲು ಈಮೇಲ್ ಅಭಿಯಾನ ನಡೆಯುತ್ತಿದ್ದು,
ಇಂದು ಬದ್ರಿಯಾ ಮಸೀದಿ ವಠಾರ ಅಲ್-ಅಮೀನ್ ಯೂತ್ ಸೆಂಟರ್ ಪೈಚಾರದ ವತಿಯಿಂದ ಮೈಲ್ ಅಭಿಯಾನ ನಡೆಯಿತು. ವಕ್ಫ್ 2024 ಮಸೂದೆಯ ವಿರುದ್ಧ ನಡೆಸುವ ಅಭಿಯಾನಕ್ಕೆ ಜನರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು. ಈಮೇಲ್ ಅಭಿಯಾನದಲ್ಲಿ ಸ್ಥಳೀಯ ನಾಯಕರು, ಕಾರ್ಯಕರ್ತರೂ, ಜಮಾಅತ್ ನಿವಾಸಿಗಳು ಸಹಕರಿಸಿದರು.