ಫಿಫಾ ವಿಶ್ವಕಪ್​ 2022ರಲ್ಲಿ ಈ ಬಾರಿ ಅನೇಕ ಅಚ್ಚರಿಯ ಫಲಿತಾಂಶಗಳು ಕಂಡುಬರುತ್ತಿದೆ. ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಬ್ರೆಜಿಲ್ ಕ್ವಾರ್ಟರ್ ಫೈನಲ್​ನಲ್ಲಿ ಸೋತರೆ ಬಳಿಕ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪೋರ್ಚುಗಲ್ ತಂಡ ಸಹ ವಿಶ್ವಕಪ್​​ ಟೂರ್ನಿಯಿಂದ ಹೊರಬಿದ್ದಿದೆ. ಫಿಫಾ ವಿಶ್ವಕಪ್ 2022 ಅಂತಿಮ ಹಂತವನ್ನು ತಲುಪಿದೆ. ಮೆಸ್ಸಿ ನೇತೃತ್ವದ ಅರ್ಜೆಂಟೀನಾ ವಿರುದ್ಧ ಕ್ರೊಯೇಷಿಯಾ, ಮೊರಾಕೊ ಮತ್ತು ಫ್ರಾನ್ಸ್ ಸೆಮಿಫೈನಲ್ ತಲುಪಿವೆ. ಪ್ರಶಸ್ತಿ ಫೇವರಿಟ್ ಆಗಿ ಕಣಕ್ಕೆ ಇಳಿದ ಬ್ರೆಜಿಲ್ ಕ್ವಾರ್ಟರ್ ಫೈನಲ್​ನಿಂದ ಹೊರಬಿದ್ದರೆ, ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪೋರ್ಚುಗಲ್ ತಂಡ ಸಹ ಕ್ವಾರ್ಟರ್ ಫೈನಲ್‌ನಲ್ಲಿ ಮೊರಾಕೊ ವಿರುದ್ಧ ಸೋಲನ್ನಪ್ಪಿತು. ಮೊರಾಕೊ ವಿರುದ್ಧದ ಪಂದ್ಯದಲ್ಲಿ ಪೋರ್ಚುಗಲ್ ಹಾಟ್ ಫೇವರಿಟ್ ಆಗಿ ಕಣಕ್ಕೆ ಇಳಿದಿತ್ತು. ಆದರೆ, ನಿರೀಕ್ಷೆಗೂ ಮೀರಿ ಆಡಿದ ಮೊರಾಕೊ ಪೋರ್ಚುಗಲ್ ವಿರುದ್ಧ 1-0 ಗೋಲುಗಳ ಅಂತರದಿಂದ ಗೆದ್ದು ಸೆಮೀಸ್​ ತಲುಪಿದೆ.

ತನ್ನ ಕೊನೆಯ ವಿಶ್ವಕಪ್‌ನಲ್ಲಿ, ರೊನಾಲ್ಡೊ ತನ್ನ ತಂಡವನ್ನು ವಿಶ್ವ ಚಾಂಪಿಯನ್ ಮಾಡುವ ಕನಸು ನುಚ್ಚುನೂರಾಗಿದೆ. ಪಂದ್ಯದ ನಂತರ ರೊನಾಲ್ಡೊ ಮೈದಾನದಲ್ಲಿ ಕಣ್ಣೀರಿಟ್ಟ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬಳಿಕ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಕುರಿತು ಭಾವನಾತ್ಮಕ ಟ್ವೀಟ್ ಮಾಡಿದ್ದರು.

ಈ ಮೊದಲು ಅನೇಕ ಸಂದರ್ಶನದಲ್ಲಿ ಕೊಹ್ಲಿ ತನ್ನ ಫೆವರೆಟ್ ಎಂದು‌ ಹೇಳಿ ಕೊಂಡಿದ್ದು ಇದೆ. ಫುಟ್ಬಾಲ್ ಜಗತ್ತಿನಲ್ಲಿ, ರೊನಾಲ್ಡೊ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಚಾಂಪಿಯನ್ ಎಂದು ಕರೆಯುತ್ತಾರೆ. ಈ ಪ್ರಶಸ್ತಿಗಳು ಆಟಗಾರರ ಹಿರಿಮೆ ಮತ್ತು ಸಾಧನೆಗಳನ್ನು ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಟ್ವೀಟ್​ ಮಾಡಿದ್ದರು. ನೀವು ಕ್ರೀಡೆಗೆ ಮತ್ತು ಅಭಿಮಾನಿಗಳಿಗಾಗಿ ಮಾಡಿರುವುದನ್ನು ಕೇವಲ ಒಂದು ಶೀರ್ಷಿಕೆ ಅಥವಾ ಟ್ರೋಫಿಯಿಂದ ನಿರ್ಧರಿಸಲಾಗದು. ಯಾವುದೇ ಶೀರ್ಷಿಕೆಯಿಂದ ನೀವು ಜನರ ಮೇಲೆ ಬೀರಿರುವ ಪ್ರಭಾವವನ್ನು ವಿವರಿಸಲು ಸಾಧ್ಯವಿಲ್ಲ. ನಾನು ಸೇರಿದಂತೆ ಪ್ರಪಂಚದ ಎಲ್ಲಾ ಅಭಿಮಾನಿಗಳು ನಿಮ್ಮ ಆಟವನ್ನು ನೋಡಿ ಆನಂಧಿಸಿದ್ದೇವೆ. ನೀವು ದೇವರು ನೀಡಿದ ಒಂದು ಉಡುಗೊರೆ. ನೀವು ಟ್ರೋಪಿ ಗೆಲ್ಲದಿದ್ದರೂ ಸಹ ನನಗೆ ನೀವು ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಭಾವನಾತ್ಮಕ ಟ್ವೀಟ್ ಹಾಕೂ ಇನ್ಸ್ಟಾಗ್ರಾಮ್ ನಲ್ಲೂ ಕೊಹ್ಲಿ ಹೇಳಿದ್ದಾರೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ