ಕಾಸರಗೋಡು, ಡಿ 14 : ಶೌಚಾಲಯದ ಗುಂಡಿಗೆ ಬಿದ್ದು ಎರಡು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಉಪ್ಪಳ ದಲ್ಲಿ ನಡೆದಿದೆ. ಉಪ್ಪಳ ದ ಅಬ್ದುಲ್ ಸಮದ್ ರವರ ಪುತ್ರ ಅಬ್ದುಲ್ ರಹಮಾನ್ ಸಹದಾದ್ (2) ಮೃತ ಪಟ್ಟ ಬಾಲಕನಾಗಿದ್ದಾನೆ. ಮನೆಯ ಹಿಂಬದಿಯಲ್ಲಿರುವ ಶೌಚಾಲಯ ಹೊಂಡಕ್ಕೆ ಬಿದ್ದು ಈ ದುರ್ಘಟನೆ ನಡೆದಿದೆ.ಶೌಚಾಲಯದ ಒಂದು ಭಾಗ ಬಿರುಕು ಬಿಟ್ಟಿದ್ದು, ಬಾಲಕ ಅರಿಯದೆ ಇದರ ಮೇಲೆ ನಡೆದು ಕೊಂಡು ಹೋದಾಗ ಈ ದುರ್ಘಟನೆ ನಡೆದಿದೆ.ಉಪ್ಪಳ ದಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬಾಲಕನನ್ನು ಹೊರ ತೆಗೆದು ಉಪ್ಪಳದ ಆಸ್ಪತ್ರೆ ಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ಮಂಜೇಶ್ವರ ಠಾಣಾ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ