ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಹಿಂದಿ ಸಂಘದ ವತಿಯಿಂದ ಹಿಂದಿ ದಿನಾಚರಣೆಯನ್ನು ಸೆಪ್ಟಂಬರ್ 14ನೇ ಶನಿವಾರದಂದು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ ಎಂ ಇವರು ದೇಶದಲ್ಲಿ ಹಿಂದಿ ಭಾಷೆಯ ಮಹತ್ವ, ಅವಕಾಶಗಳು ಮತ್ತು ವಾಸ್ತವ ಸ್ಥಿತಿಗತಿ ಬಗ್ಗೆ ಮಾತನಾಡಿದರು. ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಮಮ್ತ ಇವರು ಹಿಂದಿ ದಿನಾಚರಣೆ ಕುರಿತು ಮಾತನಾಡಿ ಎಲ್ಲರಿಗೂ ಶುಭಕೋರಿದರು. ಈ ಕಾರ್ಯಕ್ರಮದ ಮುಂಚಿತವಾಗಿ ಆಸಕ್ತ ವಿದ್ಯಾರ್ಥಿಗಳೆಲ್ಲರಿಗೂ ಹಿಂದಿ ಭಾಷೆಯಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವೇದಿಕೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ದ್ವಿತೀಯ ಬಿಎಸ್ಸಿಯ ಸೌಮ್ಯ ಮತ್ತು ತಂಡ ಪ್ರಾರ್ಥಿಸಿ, ಜೀಷ್ಮ ಸ್ವಾಗತಿಸಿ, ದ್ವಿತೀಯ ಬಿಕಾಂನ ಪ್ರಿಯ ವಂದಿಸಿದರು. ತಸ್ಲೀಮಾ ಕಾರ್ಯಕ್ರಮವನ್ನು ನಿರೂಪಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮವನ್ನು ಸಮಪನಗೊಳಿಸಸಲಾಯಿತು.