Advertisement

ತಮಿಳುನಾಡಿನ ವೆಲ್ಲೂರಿನ ಬಾಖಿಯಾತ್ ಸ್ವಾಲಿಯಾತ್ ಶಂಶುಲ್ ಉಲಮಾ ಬಾನಿ ಹಝ್ರತ್ ಶಾಹ್ ಅಬ್ದುಲ್ ವಹಾಬ್ ಅಲ್ ಖಾದಿರಿರವರ 106ನೇ ಅನುಸ್ಮರಣೆ ಹಾಗೂ ಕರ್ನಾಟಕ ಬಾಖವಿ ಉಲಮಾ ಸಂಗಮ ಡಿಸೆಂಬರ್ 13ರಂದು ಅರಂತೋಡು ನುಸ್ರತುಲ್ ಇಸ್ಲಾಂ ಸಭಾಂಗಣದಲ್ಲಿ ಉಲಮಾ ಒಕ್ಕೂಟದ ಅಧ್ಯಕ್ಷರಾದ ಅಬ್ದುಲ್ ಹಮೀದ್ ಬಾಖವಿ ಕಬಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ದುವಾ ವನ್ನು ಇಬ್ರಾಹಿಂ ಬಾಖವಿ ಉಸ್ತಾದ್ ಕೆ. ಸಿ. ರೋಡ್ ರವರು ನೆರವೇರಿಸಿದರು.

ಕಾರ್ಯಕ್ರಮದ ಉಧ್ಘಾಟನೆಯನ್ನು ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಅಲ್ ಹಾಜ್ ಇಸಾಕ್ ಬಾಖವಿಯವರು ನೆರವೇರಿಸಿದರು. ಅನುಸ್ಮರಣಾ ಬಾಷಣ ಮಾಡಿದ ಪಯ್ಯಕ್ಕಿ ಖತೀಬರಾದ ರಫೀಕ್ ಬಾಖವಿ ಮಠ ಮತನಾಡಿ ತಮಿಳುನಾಡಿನ ವೆಲ್ಲೂರಿನಲ್ಲಿರುವ ಬಾಖಿಯಾತ್ ಸ್ವಾಲಿಯಾತ್ ಧಾರ್ಮಿಕ ವಿಧ್ಯಾಕೇಂದ್ರವು ಅತ್ಯಂತ ಪುರಾತನ ವಿಧ್ಯಾ ಕೇಂದ್ರವಾಗಿದ್ದು ಸಂಶುಲ್ ಉಲಮಾರಂತಹ ಅನೇಕ ಮಹನೀಯರು, ವಿಧ್ವಾಂಸರು ಧಾರ್ಮಿಕ ಶಿಕ್ಷಣವನ್ನು ಪಡೆದ ಕೇಂದ್ರವಾಗಿದ್ದು ದೇಶದ ವಿವಿಧ ಭಾಗಗಳಲ್ಲಿ ಯಾವುದೇ ಪ್ರಚಾರ ಬಯಸದೆ ಸೇವೆ ಸಲ್ಲಿಸುತ್ತಿದ್ದಾರೆಂದರು. ಚಾಪಳ್ಳ ಮಸೀದಿಯ ಖತೀಬರಾದ ಅಶ್ರಫ್ ಬಾಖವಿ ಧಾರ್ಮಿಕ ಉಪನ್ಯಾಸವನ್ನು ನೀಡಿದರು. ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ಅರಂತೋಡು ಜಮಾಅತ್, ಅಧ್ಯಕ್ಷ ಅಶ್ರಫ್ ಗುಂಡಿ, ಜಮಾಅತ್ ಕಾರ್ಯದರ್ಶಿ, ಕೆ.ಎಂ ಮೂಸಾನ್, ದಿಕ್ರ್ ಸ್ವಲಾತ್ ಮಜಿಲಿಸ್ ಉಪಾಧ್ಯಕ್ಷ ಕೆ.ಎಂ ಅಬೂಬಕ್ಕರ್ ಪಾರೆಕ್ಕರ್, ಮದರಸ ಮ್ಯಾನೇಜ್ಮೆಂಟ್. ಸಂಚಾಲಕ ಅಮೀರ್ ಕುಕ್ಕುಂಬಳ, ಉಧ್ಯಮಿ ಸೈಪುದ್ದೀನ್ ಪಟೇಲ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಸದರ್ ಸಹದ್ ಪೈಝಿ, ಸಹಾಯಕ ಅಧ್ಯಾಪಕ ಸಾಜಿ ದ್ ಅಝ್ ಹರಿ, ಅಬ್ದುಲ್ ಖಾದರ್ ಪಠೇಲ್ ಮೊದಲಾದವರು ಉಪಸ್ಥಿತರಿದ್ದರು, ಅಬ್ದುಲ್ ಸಮದ್ ಬಾಖವಿ ಮೂಡಿಗೆರೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ