ಅರ್ತಾಜೆ ಫ್ರೆಂಡ್ಸ್ ಕ್ಲಬ್ (AFC) ಪೈಚಾರ್, ಸುಳ್ಯ ಈ ಕ್ಲಬ್’ನ ಸತತ ಯಶಸ್ವಿ 6 ಆವೃತ್ತಿಗಳ ಕಬಡ್ಡಿ ಪಂದ್ಯಾಟ ಬಳಿಕ, ಹೊನಲು ಬೆಳಕಿನ ಆಹ್ವಾನಿತ ಐದು ತಂಡಗಳ ಸೀಸನ್ 7ರ ಪ್ರೋ ಮಾದರಿಯ ಕಬಡ್ಡಿ ಪಂದ್ಯಾಟ ಹಾಗೂ ಸನ್ಮಾನ ಕಾರ್ಯಕ್ರಮ ಇದೇ ಬರುವ ಡಿಸೆಂಬರ್ 17 ರಂದು ಕುಂಬರ್ಚೋಡು ವಿನಲ್ಲಿ ನಡೆಯಲಿದೆ. ಹಾಗೂ ಕಬಡ್ಡಿ ಕ್ರೀಡಾಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ನಾಡಿನ ಹೆಸರನ್ನು ಪಸರಿಸಿದ ಮಾಜಿ ಕಬಡ್ಡಿ ಆಟಗಾರ ‘ಅಬ್ದುಲ್ ಜಬ್ಬಾರ್’ ಇವರಿಗೆ ಅದ್ದೂರಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಈ ಒಂದು ಪಂದ್ಯಾಕೂಟದ ಆಮಂತ್ರಣ ಪತ್ರಿಕೆಯನ್ನು ಡಿಸೆಂಬರ್ 14 ರಂದು ಪೈಚಾರಿನಲ್ಲಿ ಹಲವು ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂಧರ್ಭದಲ್ಲಿ ತಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ ಶಹೀದ್, ಕಾರುಣ್ಯ ಚಾರಿಟೇಬಲ್ ಅಧ್ಯಕ್ಷ ಬಶೀರ್ ಆರ್.ಬಿ, ಜಾಲ್ಸೂರು ಗಾ.ಪಂ ಸದಸ್ಯ ಮುಜೀಬ್ ಪೈಚಾರ್, ಎ.ಎಫ್.ಸಿ ಕ್ಲಬ್ ಅಧ್ಯಕ್ಷ ರಶೀದ್ ಪೈಚಾರ್, ಪ್ರಗತಿ ಲೈಟಿಂಗ್ಸ್ ಮಾಲಕರಾದ ಶಾಫಿ ಪ್ರಗತಿ, ಎ.ವೈ.ಸಿ ಅಧ್ಯಕ್ಷ ಅಬೂಸಾಲಿ, ಬಿ.ಎಫ್.ಸಿ ಅಧ್ಯಕ್ಷ ಹನೀಫ್ ಕುಂಬರ್ಚೋಡ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.