ಫಿಫಾ ಫುಟ್ಬಾಲ್ ವಿಶ್ವಕಪ್ 2022 ಫೈನಲ್ ಕದನ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವೆ ನಡೆಯಲಿದೆ. ಅರ್ಜೆಂಟೀನಾ ಮೂರು ಗೋಲುಗಳಿಂದ ಕ್ರೊಯೇಷಿಯಾವನ್ನು ಸೆಮೀಸ್ ನಲ್ಲಿ ಸೋಲಿಸಿದರೆ, ಫ್ರಾನ್ಸ್ ಎರಡು ಗೋಲುಗಳಿಂದ ಮೊರಾಕ್ಕೊವನ್ನು ಸೋಲಿಸಿ ಫೈನಲ್‌ಗೆ ತಲುಪಿದೆ. ಹಾಲಿ ಚಾಂಪಿಯನ್ ಫ್ರಾನ್ಸ್ ಸತತ ಎರಡನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ಅಗ್ರ ಫಾರ್ಮ್‌ನಲ್ಲಿರುವ ಎರಡು ತಂಡಗಳು ಮುಖಾಮುಖಿಯಾಗಿರುವುದರಿಂದ ವಿಶ್ವಕಪ್ ಫೈನಲ್ ಮತ್ತಷ್ಟು ರೋಚಕ ಘಟ್ಟದಲ್ಲಿದೆ. ಇದೇ ಡಿಸೆಂಬರ್ 18 ರಂದು ಫಿಫಾ ವಿಶ್ವಕಪ್ 2022 ಮಹಾ ಕದನ ನಡೆಯಲಿದ್ದು.

ಇನ್ನು, ಈ ಬಾರಿ ಫುಟ್‌ಬಾಲ್‌ನಲ್ಲಿ ಅನೇಕ ಬಲಿಷ್ಠ ತಂಡಗಳು ಸೆಮೀಸ್ ಹಂತದ ಮೊದಲೇ ಟೂರ್ನಿಯಿಂದ ಹೊರಬಿದ್ದಿದೆ. ಈ ಬಾರಿ ವಿಶ್ವಕಪ್ ಗೆದ್ದ ತಂಡ ತನ್ನ ಮೂರನೇ ಬಾರಿ ಪ್ರಶಸ್ತಿ ಪ್ರಶಸ್ತಿ ಗೆಲ್ಲಲಿದೆ. ಅರ್ಜೆಂಟೀನಾ 1986 ಮತ್ತು 1978ರಲ್ಲಿ ಒಟ್ಟು ಎರಡು ಬಾರಿ ವಿಶ್ವಕಪ್ ಗೆದ್ದಿತ್ತು. ಹಾಗೆಯೇ ಫ್ರಾನ್ಸ್ 1998 ಮತ್ತು 2018 ರಲ್ಲಿ ವಿಶ್ವಕಪ್ ಗೆದ್ದಿತ್ತು. ಅರ್ಜೆಂಟೀನಾವನ್ನು ಸೋಲಿಸಿ ವಿಶ್ವಕಪ್ ಗೆದ್ದರೆ ಫ್ರಾನ್ಸ್ ಮತ್ತೊಂದು ವಿಶಿಷ್ಟ ಸಾಧನೆ ಮಾಡಲಿದೆ. 60 ವರ್ಷಗಳಲ್ಲಿ 3ನೇ ಬಾರಿ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿರುವ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಫ್ರಾನ್ಸ್ ಪಾತ್ರವಾಗಲಿದೆ. ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಪಂದ್ಯವು ಸಮಕಾಲೀನ ಫುಟ್‌ಬಾಲ್‌ನಲ್ಲಿ ಅತ್ಯುತ್ತಮ ಆಟಗಾರರಾದ ಲಿಯೋನೆಲ್ ಮೆಸ್ಸಿ ಮತ್ತು ಕೈಲಿಯನ್ ಎಂಬಪ್ಪೆಯನ್ನು ಹೊಂದಿರುವ ಹಿರಿಮೆಯನ್ನು ಹೊಂದಿದೆ. ಈಗಾಗಲೇ ಈ ವಿಶ್ವಕಪ್‌ನಲ್ಲಿ ಅತೀ ಹೆಚ್ಚು ಗೋಲು ಗಳಿಸುವ ಆಟಗಾರನ ಗೋಲ್ಡನ್ ಬೂಟ್‌ಗಾಗಿ ಮೆಸ್ಸಿ ಮತ್ತು ಎಂಬಪ್ಪೆ ನಡುವೆ ಪ್ರಮುಖ ಪೈಪೋಟಿ ಏರ್ಪಟ್ಟಿದೆ. ಇಬ್ಬರೂ ಇದುವರೆಗೆ ತಲಾ ಐದು ಗೋಲು ಗಳಿಸಿದ್ದಾರೆ . ಅರ್ಜೆಂಟೀನಾ 36 ವರ್ಷಗಳ ಸುದೀರ್ಘ ಕಾಲದ ನಂತರ ವಿಶ್ವಕಪ್‌ಗಾಗಿ ಹಾತೊರೆಯುತಗತಿದೆ. ವಿಶ್ವ ಫುಟ್‌ಬಾಲ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಲಿಯೋನೆಲ್ ಮೆಸ್ಸಿಗೆ ವಿಶ್ವ ಪ್ರಶಸ್ತಿಯೊಂದಿಗೆ ವಿದಾಯ ಹೇಳಲು ಅರ್ಜೆಂಟೀನಾ ಭರ್ಜರಿ ಸಿದ್ಧತೆ ನಡೆಸಿದೆ. ಎರಡೂ ತಂಡಗಳು ಗುಂಪು ಹಂತದಲ್ಲಿ ತಲಾ ಒಂದೊಂದು ಸೋಲಿನೊಂದಿಗೆ ಪ್ರೀ ಕ್ವಾರ್ಟರ್‌ಗೆ ತಲುಪಿದವು. ಈ ಬಾರಿಯ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಅರ್ಜೆಂಟೀನಾ ಫೈನಲ್ ತಲುಪಿದ್ದು, ಸೌದಿ ವಿರುದ್ಧ ಸೋತ ನಂತರದ ಜರ್ನಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಗ್ರೂಪ್ ಹಂತದಲ್ಲಿ ಮೆಕ್ಸಿಕೊ ಮತ್ತು ಪೋಲೆಂಡ್ ತಂಡಗಳನ್ನು ಸೋಲಿಸಿತು. ಅವರು ಪ್ರಿ-ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾವನ್ನು ಮತ್ತು ಕ್ವಾರ್ಟರ್‌ನಲ್ಲಿ ನೆದರ್‌ಲ್ಯಾಂಡ್‌ಗಳನ್ನು ಸೋಲಿಸಿದರು.
ಅರ್ಜೆಂಟೀನಾ ಸೆಮಿಫೈನಲ್‌ನಲ್ಲಿ ಕ್ರೊವೇಷಿಯಾವನ್ನು ಸೋಲಿಸುವ ಮೂಲಕ ಕನಸಿನ ಫೈನಲ್‌ಗೆ ಅರ್ಹತೆ ಗಳಿಸಿತು. ಏತನ್ಮಧ್ಯೆ, ಪ್ರಮುಖ ಆಟಗಾರರು ಗಾಯಗೊಂಡಿದ್ದರೂ, ಫ್ರಾನ್ಸ್ ಈ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಅವರು ಗುಂಪು ಹಂತದಲ್ಲಿ ಟ್ಯುನೀಶಿಯಾ ವಿರುದ್ಧ ಸೋತರು. ಆದರೆ ಪ್ರಿ-ಕ್ವಾರ್ಟರ್‌ನಲ್ಲಿ ಪೋಲೆಂಡ್‌ನ್ನು ಹಾಗೂ ಕ್ವಾರ್ಟರ್‌ನಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮಣಿಸಿದ ಫ್ರಾನ್ಸ್ ಕೊನೆಯ ನಾಲ್ಕರ ಘಟ್ಟ ತಲುಪಿ, ಸೆಮಿಫೈನಲ್ ನಲ್ಲಿ ಮೊರಾಕೊದ ಹೋರಾಟದ ಮನೋಭಾವದ ಮುಂದೆ ಫ್ರಾನ್ಸ್ ಸೋಲನುಭವಿಸಿದರೂ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಗೆಲುವು ದಕ್ಕಿಸಿಕೊಂಡಿತು. ಈ ವರ್ಷದ ಅಂತಿಮ ಪಂದ್ಯವು ಭಾನುವಾರ ರಾತ್ರಿ 8:30 PM ISTಗೆ (ಭಾರತೀಯ ಕಾಲಮಾನ) ದೋಹಾದ ಲುಸೈಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಾದು ನೋಡೋಣ ಈ ಕುತೂಹಲಕಾರಿ ಪಂದ್ಯದಲ್ಲಿ ಯಾರ ಪಾಲಿಗೆ ಗೆಲುವಾಗಲಿದೆ ಎಂದು.