Advertisement
ಸುಳ್ಯ: ಇಲ್ಲಿನ ಗಾನ ಪ್ರತಿಭೆ ಶುಭದಾ ಆರ್ ಪ್ರಕಾಶ್ ಅವರ ಕಂಠದಲ್ಲಿ ಮೂಡಿ ಬಂದಿರುವ ಆಲ್ಬಮ್ ಹಾಡುಗಳು ಬಿಡುಗಡೆಯಾಗಿದೆ. ಬಿ.ಸಿ ರೋಡ್ ನಲ್ಲಿ ಈ ಆಲ್ಬಂ ಸಾಂಗ್ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮಾಣಿಕ್ಯದಂಗಣ ಪ್ರೋಡಕ್ಷನ್ ನಲ್ಲಿ ಈ ಆಲ್ಬಂ ತೆರೆಕಂಡಿದ್ದು, ನಮೋ ನಮೋ ಶಂಕರ ಎನ್ನುವ ಕನ್ನಡ ಭಕ್ತಿಗೀತೆ ರಾಜ್ ಕ್ರಿಯೇಷನ್ಸ್ ಯೂಟ್ಯೂಬ್ ಮೂಲಕ ಬಿಡುಗಡೆ ಮಾಡಲಾಗಿದೆ.

ಈ ಹಾಡಿನ ನಿರ್ಮಾಣ ರಾಜೇಶ್ ಬಿ ಸಿ ರೋಡ್ ಹಾಗೂ ಸಾಹಿತ್ಯ ರೇಣುಕಾ ಕಾಣಿಯೂರು, ರಾಗ ಸಂಯೋಜನೆ ಅಜಯ್ ರಾಜ್ ಶೆಟ್ಟಿ, ಸಂಗೀತವನ್ನು ಅಶ್ವಿನ್ ಪುತ್ತೂರು ನೀಡಿದ್ದು, ಕ್ಯಾಡ್ ಮೀಡಿಯಾದಲ್ಲಿ ಧ್ವನಿ ಮುದ್ರಣಗೊಂಡು, ಮನೀಶ್ ಛಾಯಾಗ್ರಹಣ ಮಾಡಿದ್ದಾರೆ. ಪ್ರಚಾರ ಮತ್ತು ಸಹಕಾರವನ್ನು ಸಂತೋಷ್, ಚಂದ್ರಶೇಖರ್ ಬಿ ಸಿ ರೋಡ್ ಮತ್ತು ನಾಗೇಶ್ ಬೆಳ್ಳಾರೆ ಮಾಡಿದ್ದಾರೆ.
Advertisement