ಕುತುಬಿಯಾ ಜುಮಾ  ಮಸೀದಿ, ನುಜುಮುಲ್ ಇಸ್ಲಾಂ ಎಸೋಸಿಯೇಶನ್ ಗಡಿಬಾಗಿಲು ಮತ್ತು ಎಸ್.ಕೆ.ಎಸ್.ಎಸ್ ಗಂಡಿಬಾಗಿಲು ಶಾಖೆ ಇವುಗಳ ಜಂಟಿ ಆಶ್ರಯದಲ್ಲಿ ಡಿಸೆಂಬರ್ 26ರಂದು ನಡೆಯುವ ಮರ್ ಹೂಮ್ ಡಾ| ಕೆ.ಎಂ ಶಾಹ್ ಮುಸ್ಲಿಯಾರ್ರವರ ಮಕ್ಬರ ಕಟ್ಟಡದ ಉದ್ಘಾಟನೆ ಹಾಗೂ ಸಮಸ್ತ ನೇತಾರರ ಅನುಸ್ಮರಣೆ ಕಾರ್ಯಕ್ರಮದ ಪೋಸ್ಟರ್ ರನ್ನು ಅರಂತೋಡಿನಲ್ಲಿ ನಡೆದ ಸಮಾರಂಭದಲ್ಲಿ ಗಂಡಿಬಾಗಿಲು ಜಮಾಅತ್ ಅಧ್ಯಕ್ಷ ಆದಂಹಾಜಿ ಬಡ್ದಮ್ಮೆರವರು ಅರಂತೋಡು ಜುಮಾ ಮಸೀದಿಯ ಖತೀಬರಾದ ಹಾಜಿಇಸಾಕ್ ಬಾಖವಿಯವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು 
. ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಅಶ್ರಫ್ ಗುಂಡಿಯವರು ವಹಿಸಿದರು. ಕಾರ್ಯಕ್ರಮದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ಮಾತನಾಡಿ ಶಾಹ್ ಮುಸ್ಲಿಯಾರ್ ರವರು ಅರಂತೋಡು ಬದ್ರಿಯಾ ಜುಮಾ ಮಸೀದಿಯ ಧರ್ಮ ಗುರುಗಳಾಗಿ 35 ವರ್ಷಗಳ ಕಾಲ ನಿಷ್ಕಳಂಕವಾಗಿ ಸೇವೆ ಸಲ್ಲಿಸಿದ್ದು, ಇಲ್ಲಿನ ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಆದುದರಿಂದ ಡಿಸಂಬರ್.26 ರಂದು ಗಂಡಿಬಾಗಿಲಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾವೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು. ಸಮಾರಂಭದಲ್ಲಿ ಗಂಡಿಬಾಗಿಲು ಜಮಾಅತ್ ಕಾರ್ಯದರ್ಶಿ ಎಸ್.ಆದಂಹಾಜಿ ಅರಂತೋಡು ಜಮಾಅತ್ ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಕಾರ್ಯದರ್ಶಿ ಕೆ. ಎಂ ಮೂಸಾನ್, ದಿಕ್ರ್ ಸ್ವಲಾತ್ ಉಪಾಧ್ಯಕ್ಷ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಜಮಾಅತ್ ನಿರ್ದೇಶಕರಾದ ಅಬ್ದುಲ್ ಖಾದರ್ ಪಠೇಲ್, ಅಮೀರ್ ಕುಕ್ಕುಂಬಳ, ಮೊಯಿದು ಕುಕ್ಕುಂಬಳ, ಸಂಶುದ್ದೀನ್ ಪೆಲ್ತಡ್ಕ, ಯುವ ಉಧ್ಯಮಿ ಸೈಪುದ್ಧೀನ್ ಪಠೇಲ್, ರಿಯಾಝ್ ಗಂಡಿಬಾಗಿಲು, ಕಲಂದರ್ ಗಂಡಿಬಾಗಿಲು, ನಿಸಾರ್ ಗಂಡಿಬಾಗಿಲು, ಅರಂತೋಡು ಎಸ್.ಕೆ.ಎಸ್.ಎಸ್ ಶಾಖೆಯ ಅಧ್ಯಕ್ಷ ಆಶಿಕ್ ಕುಕ್ಕುಂಬಳ, ಕಾರ್ಯದರ್ಶಿ ಮುಝಮ್ಮಿಲ್ ಕುಕ್ಕುಂಬಳ, ವಿಕಾಯ ಸದಸ್ಯರಾದ ತಾಜುದ್ದೀನ್ ಅರಂತೋಡು, ಜುಬೈರ್ ಎಸ್.ಇ, ಅನ್ವಾರುಲ್ ಹುದಾ ಅಸೋಸಿಯೇಶನ್ ಕಾರ್ಯದರ್ಶಿ ಪಸೀಲು, ಕೋಶಾದಿಕಾರಿ ಅಝರುದ್ಧೀನ್ , ನಿವ್ರತ್ತ ಉಪನ್ಯಾಸಕ ಎ.ಅಬ್ದುಲ್ಲ, ಎ.ಉಮ್ಮರ್, ಜವಾದ್ ಪಾರೆಕ್ಕಲ್, ಮುಜೀಬ್, ಲತೀಫ್ ಮೊಟ್ಟೆಂಗಾರ್ ಹಮೀದ್ ಅಡಿಮರಡ್ಕ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ