ವಿಜಯನಗರ: ಪ್ರವಾಸಕ್ಕೆಂದು ಹೊರಟಿದ್ದ ಬಸ್ ನ ಎಕ್ಸಿಲ್ ಮುರಿದು ಸಂಭವಿಸಬಹುದಾದ ದೊಡ್ಡ ಅನಾಹುತವೊಂದು ತಪ್ಪಿದೆ. ಹೌದು, ಪ್ರವಾಸಕ್ಕೆಂದು ಪ್ರಯಾಣಿಸುತ್ತಿದ್ದ ಬಸ್ ನ ಆಕ್ಸಿಲ್ ಕಟ್ ಆಗಿದೆ.

ಸಾಮಾನ್ಯವಾಗಿ, ವಾಹನಗಳ ಹಿಂದಿನ ಚಕ್ರಗಳ ಆ್ಯಕ್ಸೆಲ್ (axel) ಮುರಿದು ಸಂಭವಿಸುವ ಅಪಘಾತಗಳ ಪರಿಣಾಮಗಳು ಭೀಕರವಾಗಿರುತ್ತವೆ. ಆದರೆ ಪ್ರವಾಸಕ್ಕೆ ಹೊರಟಿದ್ದ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆಯ ಶಾಲೆಯೊಂದರ ಸುಮಾರು 50 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಿಜಕ್ಕೂ ಅದೃಷ್ಟವಂತರು. ವಿಜಯನಗರ (Vijayanagar) ಜಿಲ್ಲೆ ಹಗರಿಬೊಮ್ಮನಹಳ್ಳಿ ಬಳಿ ಅವರು ಪ್ರಯಾಣಿಸುತ್ತಿದ್ದ ಬಸ್ ಹೀಗೆ ಆ್ಯಕ್ಸೆಲ್ ಮುರಿದು ಚಕ್ರಗಳು ವಾಹನದಿಂದ ಬೇರ್ಪಟ್ಟಿದೆ. ಬಸ್ ಒಂದು‌ ಕಡೆ ಹಿಂದಿನ ಟಯರ್ ಒಂದು ಕಡೆ ಎಂಬಂತಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ, ಬಸ್ಸಿನ ಅವಸ್ಥೆ ನೋಡಿದರೆ ಮಕ್ಕಳು ನಿಜಕ್ಕೂ ಅದೃಷ್ಟಶಾಲಿಗಳು ಎಂದು ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ