ಫಿಫಾ ವಿಶ್ವಕಪ್ 2022 ಅನ್ನು ಅರ್ಜೆಂಟೀನಾ ಗೆಲ್ಲುವ ಮೂಲಕ ಮೆಸ್ಸಿಯ ಕನಸು ನನಸಾಗಿದೆ. ಈ ಗೆಲುವಿನೊಂದಿಗೆ ಮೆಸ್ಸಿ ಹಲವು ದಾಖಲೆಗಳನ್ನು ಮುರಿದಿದ್ದಾರೆ. ಒಂದೇ ವಿಶ್ವ ಕಪ್ ನಲ್ಲಿ ಅತೀ ಹೆಚ್ಚು ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಅನ್ನು ಪಡೆದುಕೊಂಡರು. ಫಿಫಾ ವಿಶ್ವಕಪ್ ಗೆದ್ದ ನಂತರ ಮೆಸ್ಸಿ ಹಂಚಿಕೊಂಡ ಇನ್ಸ್ಟಾಗ್ರಾಂ ಪೋಸ್ಟ್‌ ಇದೀಗ ಸಖತ್​ ವೈರಲ್ ಆಗಿದ್ದು, ಇದೀಗ ನೂತನ ದಾಖಲೆ ಬರೆದಿದೆ.ಇದೀಗ ಮೆಸ್ಸಿ ಮೈದಾನದ ಹೊರಗೆ ದಾಖಲೆ ಬರೆದಿದ್ದಾರೆ. ವಿಶ್ವಕಪ್ ವಿಜಯದ ನಂತರ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಕ್ರಿಸ್ಟಿಯಾನೋ ರೊನಾಲ್ಡೊ ಅವರ ದಾಖಲೆಯನ್ನು ಮೀರಿಸಿದೆ.

ಇದಲ್ಲದೇ ವಿಶ್ವದಲ್ಲಿ ಅತೀ ಹೆಚ್ಚು ಲೈಕ್ ಪಡೆದ ಪೋಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಫೈನಲ್‌ನಲ್ಲಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಫ್ರಾನ್ಸ್ ಅನ್ನು ಸೋಲಿಸಿತು. ಅರ್ಜೆಂಟೀನಾ ಮೂರನೇ ಬಾರಿ ವಿಶ್ವಕಪ್ ಗೆದ್ದುಕೊಂಡಿದೆ ಮತ್ತು ಈ ಹಿಂದೆ 1986 ರಲ್ಲಿ ವಿಶ್ವಕಪ್ ಗೆದ್ದಿತ್ತು. ಈ ಗೆಲುವಿನ ನಂತರ, ಮೆಸ್ಸಿ ತಮ್ಮ ಅಧಿಕೃತ Instagram ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಲಿಯೋನೆಲ್ ಮೆಸ್ಸಿ ಹಂಚಿಕೊಂಡ ಪೋಸ್ಟ್​ನಲ್ಲಿ, ‘ನಾನು ಅನೇಕ ಬಾರಿ ಅದರ ಬಗ್ಗೆ ಕನಸು ಕಂಡೆ. ನನಗೆ ನಂಬಲಾಗಲಿಲ್ಲ. ನನ್ನ ಕುಟುಂಬ, ಬೆಂಬಲಿಗರು ಮತ್ತು ನಮ್ಮನ್ನು ನಂಬಿದ ಎಲ್ಲರಿಗೂ ಧನ್ಯವಾದಗಳು. ಅರ್ಜೆಂಟೀನಾದವರು ಒಟ್ಟಾಗಿ ಹೋರಾಡಿ ತಮ್ಮ ಗುರಿಗಳನ್ನು ತಲುಪಿದೆವು ಎಂದು ಬರೆದುಕೊಂಡಿದ್ದಾರೆ. ಅರ್ಜೆಂಟೀನಾದ ಸ್ಟಾರ್ ಸ್ಟ್ರೈಕರ್ ಲಿಯೋನೆಲ್ ಮೆಸ್ಸಿ ಅವರ ಪೋಸ್ಟ್ ಫ್ರಾನ್ಸ್ ವಿರುದ್ಧದ ಗೆಲುವಿನ ನಂತರ ಕ್ರೀಡಾಪಟುಗಳಿಂದ ಹೆಚ್ಚು ಇಷ್ಟಪಟ್ಟ ಪೋಸ್ಟ್ ಆಗಿದೆ. ಕ್ರಿಸ್ಟಿಯಾನೊ ರೊನಾಲ್ಡೊ ಚೆಸ್ ಆಡುತ್ತಿರುವ ಪ್ರಸಿದ್ಧ ಫೋಟೋದ ಪೋಸ್ಟ್ ಅನ್ನು ಸಹ ಇದು ಮೀರಿಸಿದೆ. ಫಿಫಾ ವಿಶ್ವಕಪ್ ಗೆದ್ದ ನಂತರ ಮೆಸ್ಸಿ ಅವರ ಪೋಸ್ಟ್ 20 ಡಿಸೆಂಬರ್ 2022 ರವರೆಗೆ ಬರೋಬ್ಬರಿ 6 ಕೋಟಿ ಲೈಕ್‌ಗಳನ್ನು ಪಡೆದುಕೊಂಡಿದೆ. ಇದರೊಂದಿಗೆ ಮೆಸ್ಸಿಯ ಪೋಸ್ಟ್ ಇನ್‌ಸ್ಟಾಗ್ರಾಮ್‌ನಲ್ಲಿ ವಿಶ್ವದ ಅತೀ ಹೆಚ್ಚು ಲೈಕ್ ಪಡೆದ ಪೋಸ್ಟ್ ಆಗಿದೆ. ಮೆಸ್ಸಿಯ ಪೋಸ್ಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಇಷ್ಟಪಟ್ಟ ಪೋಸ್ಟ್ ಆಗಿದೆ. ಈ ಹಿಂದೆ ವಿಶ್ವ ದಾಖಲೆಯ ಮೊಟ್ಟೆಯ ಫೋಟೋ ಮೊದಲ ಸ್ಥಾನದಲ್ಲಿತ್ತು. ಈ ಮೊಟ್ಟೆಯ ಫೋಟೋ 5 ಕೋಟಿ 60 ಲಕ್ಷ ಲೈಕ್‌ಗಳನ್ನು ಪಡೆದುಕೊಂಡಿದೆ. ಇನ್ನೂ, ಮೆಕ್ಸಿಕೊ ಮತ್ತು ಕೆನಡಾ 2026 ರ ಫಿಫಾ ವಿಶ್ವಕಪ್ ಅನ್ನು ಅಮೆರಿಕದೊಂದಿಗೆ ಆಯೋಜಿಸುತ್ತಿವೆ. ಆದರೆ 2026ರ ವಿಶ್ವಕಪ್‌ನಿಂದ ಸ್ವರೂಪ ಬದಲಾಗಲಿದೆ. ತಂಡಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಪ್ರಸ್ತುತ, ಕೇವಲ 32 ತಂಡಗಳು ವಿಶ್ವಕಪ್​​ ಅಂತಿಮ ತಂಡವಾಗಿ ಕಣಕ್ಕಿಳಿಯುತ್ತಿದ್ದವು. ಆದರೆ ಇದೀಗ ಈ ಸಂಖ್ಯೆ 2026ರಲ್ಲಿ 48ಕ್ಕೆ ತಲುಪಲಿದೆ. ಪ್ರತಿ ಗುಂಪಿಗೆ 3 ತಂಡಗಳಂತೆ 16 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಅಗ್ರ 2 ರಲ್ಲಿ ನಿಲ್ಲುವ ಎಲ್ಲಾ 32 ತಂಡಗಳು ನಾಕೌಟ್ ತಲುಪುತ್ತವೆ. ಏಷ್ಯಾದ 5 ತಂಡಗಳು ಮಾತ್ರ 2022ರ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದಿವೆ. ಕತಾರ್ ಆತಿಥೇಯರಾಗಿ ಅರ್ಹತೆ ಪಡೆದಿತ್ತು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ