ಉತ್ತರ ಪ್ರದೇಶ: ಬಾಲಕಿಯೊಬ್ಬಳು ಬಾಯಿಯಲ್ಲಿ ಪೆನ್ಸಿಲ್ ಇಟ್ಟು ಸಿಪ್ಪೆ ತೆಗೆಯುವಾಗ ಗಂಟಲಿನಲ್ಲಿ ಸಿಪ್ಪೆ ಅಂಟಿಕೊಂಡು ಮೃತಪಟ್ಟಿರುವ ಖೇದಕರ ಘಟನೆ ಉತ್ತರ ಪ್ರದೇಶದ ಹಮೀರ್ ಪುರದಲ್ಲಿ ಸಂಭವಿಸಿದೆ. ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಅರ್ತಿಕಾ ತನ್ನ ಮನೆಯ ಟೆರೇಸ್ ಮೇಲೆ ತನ್ನ ಸಹೋದರನೊಂದಿಗೆ ಓದುತ್ತಿದ್ದ ಸಮಯ ಪೆನ್ಸಿಲ್ ಸಿಪ್ಪೆ ತೆಗೆಯಲು ಬಾಯಿಯಲ್ಲಿ ಕಟ್ಟರ್ ಇಟ್ಟುಕೊಂಡು ಸಿಪ್ಪೆ ಸುಲಿಯುತ್ತಿದ್ದಳು. ಈ ಸಂದರ್ಭ ದುರಾದೃಷ್ಟವಶಾತ್ ಸಿಪ್ಪೆಯು ಬಾಲಕಿಯ ಗಂಟಲಿನಲ್ಲಿ ಸಿಕ್ಕಿಕೊಂಡು ಉಸಿರುಗಟ್ಟಿಸಲಾರಂಭಿಸಿದೆ. ತಕ್ಷಣವೇ ಮನೆಯವರು ನೋಡಿ, ಆಸ್ಪತ್ರೆಗೆ ಕರೆದೊಯ್ದವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ