ಇರ್ಫಾನಿಯಃ ದಅವಾ ಸಂಘ ಸುಳ್ಯ ವಲಯ ಇದರ ಮಹಾಸಭೆಯು 24.12.2022 ರಂದು ಸುನ್ನೀ ಮಹಲ್ ಸಮಸ್ತ ಕಾರ್ಯಾಲಯದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಇರ್ಫಾನಿಯಃ ಕಾಲೇಜ್ ಮುದರ್ರಿಸರಾದ ಶರೀಫ್ ಫೈಝಿ ಇರ್ಫಾನಿ ವಹಿಸಿದರು. ಹಸನ್ ಮುಸ್ಲಿಯಾರ್ ಚಪ್ಪಾರಪಡವು ಕಾರ್ಯಕ್ರಮ ಉದ್ಘಾಟಿಸಿದರು. ಶಮೀಮ್ ಅರ್ಷದಿ ಪಾಜಪ್ಪಳ್ಳ 2020-22 ನೆ ಸಾಲಿನ ವರದಿ ವಾಚಿಸಿದರು. ಹಾಜಿ ಎಸ್.ಎ ಹಮೀದ್ ಲೆಕ್ಕಪತ್ರ ಮಂಡನೆ ನಡೆಸಿದರು. ವೀಕ್ಷಕರಾಗಿ ಉಸ್ತಾದ್ ಸವಾದ್ ಇರ್ಫಾನಿ ಆಗಮಿಸಿದರು. 2023-25 ನೇ ನೂತನ ಸಮಿತಿಯನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ಹಾಜಿ ಎಸ್.ಎ ಹಮೀದ್, ಪ್ರ.ಕಾರ್ಯದರ್ಶಿ ಶಮೀಮ್ ಅರ್ಷದಿ ಪಾಜಪ್ಪಳ್ಳ, ಕೋಶಾಧಿಕಾರಿ ಹಾಜಿ ಕೆ.ಮಮ್ಮಾಲಿ ಬೆಳ್ಳಾರೆ, ವರ್ಕಿಂಗ್ ಅಧ್ಯಕ್ಷ ಅಶ್ರಫ್ ಮುಸ್ಲಿಯಾರ್ ಅಡ್ಕಾರ್, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಫೈಝಿ, ಅಬೂಬಕ್ಕರ್ ಪಾರೆಕ್ಕಲ್, ವರ್ಕಿಂಗ್ ಕಾರ್ಯದರ್ಶಿ ಖಲೀಲ್ ಮಂಡೆಕೋಲ್, ಜೊತೆ ಕಾರ್ಯದರ್ಶಿ ಇಸ್ಮಾಯಿಲ್ ಇಂದ್ರಾಜೆ, ಹಾರಿಸ್ ಸೆಲ್ ಹೌಸ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಬ್ದುಲ್ ಖಾದರ್ ಹಾಜಿ ಅಜ್ಜಾವರ, ಅಹ್ಮದ್ ಸುಪ್ರೀಂ, ಬಾತಿಶ ಮಂಡೆಕೋಲ್, ಅಬ್ದುಲ್ಲ ಫೈಝಿ ಕನಕಮಜಲ್, ಶಂಸುದ್ದೀನ್ ಮುಸ್ಲಿಯಾರ್, ಉಮರ್ ಪೆರ್ಲಂಬಾಡಿಯವರನ್ನು ಆಯ್ಕೆ ಮಾಡಲಾಯಿತು. ಕೇಂದ್ರ ಕೌನ್ಸಿಲ್ ಸದಸ್ಯರುಗಳಾಗಿ ಅಬ್ದುಲ್ ಖಾದರ್ ಹಾಜಿ ಆಜಾದ್, ಮುಹಮ್ಮದ್ ಮಣಿಮಜಲ್, ಎ.ಎಂ ಅಬೂಬಕ್ಕರ್ ಅಜ್ಜಾವರ, ಅಮೀರ್ ಕುಕ್ಕುಂಬಳ್ಳ ಇವರನ್ನು ಆಯ್ಕೆ ಮಾಡಲಾಯಿತು. ಉಮರ್ ಫೈಝಿ ನೆಲ್ಯಾಡಿ ಸ್ವಾಗತಿಸಿ ಶಮೀಮ್ ಅರ್ಷದಿ ವಂದಿಸಿದರು