ಸುಳ್ಯ: 4G ಕ್ರಿಕೆಟರ್ಸ್ ದುಗ್ಗಲಡ್ಕ ಇದರ ಆಶ್ರಯದಲ್ಲಿ ‘ಸುಳ್ಯ ಕ್ರಿಕೆಟ್ ಹಬ್ಬ’ ಡಿಸೆಂಬರ್ 24 ಹಾಗೂ 25 ರಂದು ಗೌಡ ಸಮುದಾಯ ಭವನ ಕೊಡಿಯಾಲಬೈಲ್ ಮೈದಾನದಲ್ಲಿ ನಡೆಯಿತು. ಆಹ್ವಾನಿತ 12 ತಂಡಗಳ ಅಂಡರ್ ಆರ್ಮ್ ಈ ಕ್ರಿಕೆಟ್

ಪಂದ್ಯಾಟದಲ್ಲಿ 12 ಐಕಾನ್ ಆಟಗಾರರನ್ನೊಳಗೊಂಡಂತೆ A ಹಾಗೂ B ಪೂಲ್ ಗಳಲ್ಲಿ‌ ಪಂದ್ಯಾಟವನ್ನು‌ ಹಮ್ಮಿಕೊಳ್ಳಲಾಯಿತು.

ಚಾಂಪಿಯನ್

ಈ ಪಂದ್ಯಾಟದ ಚಾಂಪಿಯನ್ ಆಗಿ ಡಿ ಸ್ಪೋರ್ಟ್ಸ್ ಸುಳ್ಯ ತಂಡ ಹೊರಹೊಮ್ಮಿತು, ₹25,000 ನಗದು ಹಾಗೂ 4G ಶಾಶ್ವತ ಫಲಕ‌ ತನ್ನದಾಗಿಸಿಕೊಂಡಿತು.

ರನ್ನರ್ಸ್

₹15,000 ಹಾಗೂ ರನ್ನರ್ಸ್ ಪ್ರಶಸ್ತಿಯನ್ನು ಯುವ ಶಕ್ತಿ ‌ನಾವೂರು ತಂಡ ಪಡೆದುಕೊಂಡಿತು. ಈ ಪಂದ್ಯಾವಳಿಯ ವೈಯುಕ್ತಿಕ

ಪಂದ್ಯ ಶ್ರೇಷ್ಠ ಕಿರಣ್ ದೊಡ್ಡತೋಟ,

ಸರಣಿ ಶ್ರೇಷ್ಠ ರಶೀದ್ ದುಗ್ಗಲಡ್ಕ,

ಉತ್ತಮ ದಾಂಡಿಗ ಆಸಿಫ್ ಮುಡೂರು,

ಉತ್ತಮ ಗೂಟರಕ್ಷಕ ಶಾಕಿರ್ ಕಂಚಿಲ್ಪಾಡಿ,

ಉತ್ತಮ ಎಸೆತಗಾರ ಶಿವ ಜಾಲ್ಸೂರು

ಉತ್ತಮ ಕ್ಷೇತ್ರ ರಕ್ಷಕ ಗಣೇಶ್ ಉಬರಡ್ಕ

ಪ್ರಶಸ್ತಿಯನ್ನು ಪಡೆದುಕೊಂಡರು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ