ರಾಯಚೂರು : ಎಳೆ ಮಕ್ಕಳ ಆರೋಗ್ಯ ಕುರಿತು ನಿರ್ಲಕ್ಷ್ಯ ಸಲ್ಲದು, 5 ನೇ ತರಗತಿಯ ವಿದ್ಯಾರ್ಥಿಯೊಬ್ಬ ಲೋ ಬಿಪಿ ಯಿಂದ ತರಗತಿಯಲ್ಲೇ ಪ್ರಾಣ ಬಿಟ್ಟ ಘಟನೆ ರಾಯಚೂರಿನಲ್ಲಿ ನಡೆದಿದೆ. ಮಹಾಮಾರಿ ಕೋವಿಡ್ ಬಳಿಕ ಜನರ ಆರೋಗ್ಯದಲ್ಲಿ ತೀರಾ ಬದಲಾವಣೆಗಳು ಆಗಿದ್ದು ವಯಸ್ಸಿನ ಮಿತಿಯಿಲ್ಲದೆ ಜನ ಅಲ್ಲಲ್ಲಿ ಪ್ರಾಣ ಬಿಡುತ್ತಿದ್ದಾರೆ. ಎಳೆ ವಯಸ್ಸಿನ ಪುಟ್ಟ ಮಕ್ಕಳಿಂದ ಹಿಡಿದು 50 – 60 ವರ್ಷದ ಜನ ಗೊತ್ತಿಲ್ಲದೇ ಏಕಾಏಕಿ ಕುಸಿದು ಬಿದ್ದು, ಮಲಗಿದಲ್ಲಿ ಪ್ರಾಣ ಕಳಕೊಳ್ಳುತ್ತಿದ್ದಾರೆ.
ತರಗತಿಯಲ್ಲೇ ಏಕಾಏಕಿ ಲೋ ಬಿಪಿಯಿಂದ ಕುಸಿದು ಬಿದ್ದು ವಿದ್ಯಾರ್ಥಿ ಸಾವನಪ್ಪಿರುವ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾ. ಗಬ್ಬೂರು ಗ್ರಾಮದಲ್ಲಿ ನಡೆದಿದೆ. 5ನೇ ತರಗತಿ ವಿದ್ಯಾರ್ಥಿ ಶಿವಪ್ರಸಾದ್ ಮೃತ ಬಾಲಕ. ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ವಿದ್ಯಾರ್ಥಿ ಶಿವಪ್ರಸಾದ್ ವಕೀಲ ಶಿವಣ್ಣ ಎಂಬುವವರ ಪುತ್ರ. ಗಬ್ಬೂರ್ನಲ್ಲಿ ಸೈನಿಕ ನವೋದಯ ಕೋಚಿಂಗ್ ಪಡೆಯುತ್ತಿದ್ದ ಇನ್ನು ಕೋಚಿಂಗ್ ಸೆಂಟರ್ನಲ್ಲೇ ಏಕಾಏಕಿ ಲೋ ಬಿಪಿಯಾಗಿ ಬಾಲಕ ಶಿವಪ್ರಸಾದ್ ಸಾವನಪ್ಪಿದ್ದು, ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.