ಭಾರತ ಸರ್ಕಾರದ ನಿರ್ದೇಶನದಂತೆ ರಾಷ್ಟ್ರದಾದ್ಯಂತ ಸೆ. 17ರಿಂದ ಅ. 2 ರ ತನಕ ನಡೆಯುವ “ಸ್ವಚ್ಛತಾ ಹಿ ಸೇವಾ” ಕಾರ್ಯಕ್ರಮವು ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆರಂಭಗೊಂಡಿತು.


ಕಾಲೇಜಿನ ಪ್ರಾಂಶುಪಾಲ ಶ್ರೀಧರ ಎಂ ಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಸ್ವಚ್ಛತೆಯ ಪ್ರಮಾಣವಚನ ಬೋಧಿಸಿದರು. ಇನ್ನೋರ್ವ ಕಾರ್ಯಕ್ರಮಾಧಿಕಾರಿ ಸುನಿಲ್ ಕುಮಾರ್ ಎನ್. ಪಿ , ಎನ್ಎಸ್ಎಸ್ ಘಟಕದ ನಾಯಕರಾದ ಪ್ರಣಮ್ ವೈ, ದೀಕ್ಷಿತಾ ಕೆ ಸಿ, ಅಪೂರ್ವ ಹಾಗೂ ಹಾಗೂ ಎನ್ ಎಸ್ ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು. ಪ್ರಮಾಣವಚನ ಸ್ವೀಕಾರದ ನಂತರ ಸ್ವಯಂಸೇವಕರು ಕಾಲೇಜಿನ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಿದರು.

Leave a Reply

Your email address will not be published. Required fields are marked *